Wednesday, January 28, 2026

ವಿಟ್ಲ: ನಿವೃತ್ತ ವೈಸ್ ಪ್ರಿನ್ಸಿಪಾಲ್‌ಗೆ ಬೀಳ್ಕೊಡುಗೆ, ಅಭಿನಂದನೆ

ವಿಟ್ಲ: ಯಾವುದೇ ವೃತ್ತಿಯಲ್ಲಿ ಸ್ವಯಂಪ್ರೇರಿತವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆ ಅವರವರ ಸ್ವಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ, ಹೊಸತನವನ್ನು ಊರ್ಜಿತಗೊಳಿಸಲು ಸದಾ ಮನಸ್ಕರಾಗಿರುವ ಮಾದರಿ ಶಿಕ್ಷಕರ ಸಾಲಿನಲ್ಲಿ ಶಾಲಿನಿ ನೋಂಡಾ ಸದಾ ಸ್ಮರಣೀಯರು ಎಂದು ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್. ಎನ್. ಕೂಡೂರು ತಿಳಿಸಿದರು.
ಅವರು ಭಾನುವಾರ ವಿಠಲ್ ಜೇಸೀಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ನಿವೃತ್ತ ವೈಸ್ ಪ್ರನ್ಸಿಪಾಲ್ ಶಾಲಿನಿ ನೋಂಡಾ ಅವರ ಬೀಳ್ಕೊಡುಗೆ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ವೈಸ್ ಪ್ರಿನ್ಸಿಪಾಲ್ ಶಾಲಿನಿ ನೋಂಡ ಮಾತನಾಡಿ ಕೆಲಸದಲ್ಲಿ ಶ್ರದ್ಧೆ, ಸಹದ್ಯೋಗಿಗಳಲ್ಲಿ ಹೊಂದಾಣಿಕೆಯಿದ್ದು ಸಂಸ್ಥೆ ಶ್ರೇಯೋಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು ಎಂದರು.
ಆಡಳಿತ ಮಂಡಳಿಯಿಂದ ಹಾಗೂ ಸಿಬ್ಬಂದಿಗಳ ಪರವಾಗಿ ಅವರನ್ನು ಸಮ್ಮಾನಿಸಲಾಯಿತು.
ಶಾಲಾ ಆಡಳಿತ ಮಂಡಳಿ ಸದಸ್ಯರು, ಪ್ರಿನ್ಸಿಪಾಲ್ ಜಯರಾಮ್ ರೈ, ಆಡಳಿತಾಧಿಕಾರಿ ರಾಧಾಕೃಷ್ಣ. ಎ, ವೈಸ್ ಪ್ರಿನ್ಸಿಪಾಲ್‌ರುಗಳಾದ ಜ್ಯೋತಿ ಶೆಣೈ, ಹೇಮಲತಾ ಸಹಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಹಶಿಕ್ಷಕಿ ಧನಲಕ್ಷ್ಮಿ ಪ್ರಾರ್ಥಿಸಿದರು. ಸಹ ಶಿಕ್ಷಕಿ ನಯನ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶೇಖ್ ಝುಕಿಯಾ ನಿರೂಪಿಸಿ, ವಂದಿಸಿದರು.

 

 

More from the blog

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...

ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಒಡಿಯೂರುಶ್ರೀ

ವಿಟ್ಲ: ಸದೃಢ ದೇಶ ನಿರ್ಮಾಣದಲ್ಲಿ ಸೈನಿಕರ ಪರಿಶ್ರಮ, ತ್ಯಾಗ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ರಾಜಾಂಗಣದಲ್ಲಿ...

ವಿಟ್ಲ ಪಡ್ನೂರು : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ವಿಟ್ಲ: ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ವಿಟ್ಲ ಪಡ್ನೂರು ಗ್ರಾಮ...