ವಿಟ್ಲ: ತತ್ವ ಸ್ಕೂಲ್ ಆಫ್ ಆರ್ಟ್ ನ ನೂತನ ತರಗತಿ ವಿಟ್ಲದಲ್ಲಿ ಡಿ. 4 ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ಉದ್ಯಮಿ ರಾಧಾಕೃಷ್ಣ ನಾಯಕ್ ನೆರವೇರಿಸಿದರು. ಕಾಸರಗೋಡು ರಸ್ತೆಯ ವಜ್ರ ಗೋಲ್ಡ್ ಎದುಗಡೆಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ವಿಠ್ಠಲ ಹೈಸ್ಕೂಲ್‌ನ ಉಪಪ್ರಾಂಶುಪಾಲ ಕಿರಣ್ ಕುಮಾರ್, ಖ್ಯಾತ ವ್ಯಂಗ್ಯ ಚಿತ್ರಗಾರ, ವಿಠ್ಠಲ ಹೈಸ್ಕೂಲ್‌ನ ಚಿತ್ರಕಲಾ ಅಧ್ಯಾಪಕ ಉದಯ್ ವಿಟ್ಲ ಆಗಮಿಸಿದ್ದರು. ತತ್ವ ಸ್ಕೂಲ್ ಆಫ್ ಆರ್ಟ್ ನ ನಿರ್ದೇಶಕ ಟೀಲಾಕ್ಷ ನಿರೂಪಿಸಿದರು. ಕಲಾಶ್ರೀ ಪ್ರಾರ್ಥಿಸಿದರು.

ತರಗತಿಗಳು: ಪೆನ್ಸಿಲ್ ಶೇಡಿಂಗ್, ವಾಟರ್ ಕಲರ್, ಪೋಸ್ಟರ್ ಕಲರ್, ಆಯಿಲ್ ಪೆಸ್ಟಲ್, ಸಾಂಪ್ರದಾಯಿಕ ಚಿತ್ರಕಲೆ, ಆಯಿಲ್ ಪೈಂಟಿಂಗ್, ಆಕ್ರಲಿಕ್ ಹೀಗೆ ನಾನ ತರಬೇತಿಗಳು ಲಭ್ಯ. ಗುರುವಾರ ಸಂಜೆ 4ರಿಂದ 7 ಗಂಟೆಯವರೆಗೆ ಹಾಗೂ ಆದಿತ್ಯವಾರ 9 ರಿಂದ 1 ಗಂಟೆಯವರೆಗೆ ತರಗತಿಗಳು ನಡೆಯುತ್ತವೆ.
