ವಿಟ್ಲ : ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯವರು ಕೊಡುಗೆಯಾಗಿ ನೀಡಿದ ಆಧುನಿಕರಿಸಿದ ನಲಿಕಲಿ ಕೊಠಡಿಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಿದರು. ಕಂಪೆನಿಯ ಡೆಪ್ಯುಟಿ ಜನರಲ್ ಮೇನೆಜರ್ ಜಿ.ಸುಂದರ್ ರಾಮನ್, ಡಿವಿಜನಲ್ ಮೇನೆಜರ್ ವಿ. ಪದ್ಮನಾಭ ನಾಕ್, ಪುತ್ತೂರು ಬ್ರಾಂಚ್ ಮೇನೇಜರ್ ವಿ. ಚಂದ್ರಶೇಖರ ಶೆಟ್ಟಿ, ವಿಟ್ಲ ಪ.ಪಂ. ಅಧ್ಯಕ್ಷ ಅರುಣ್ ವಿಟ್ಲ, ಸದಸ್ಯ ಕೆ.ಮಂಜುನಾಥ ಕಲ್ಲಕಟ್ಟ, ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ ಸದಸ್ಯರಾದ ಶ್ರೀನಿವಾಸ ಚಂದಳಿಕೆ, ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಇದ್ದರು.
