ವಿಟ್ಲ: ನಮ್ಮ ನಂಬಿಕೆಯ ಶಕ್ತಿಯ ಮೇಲೆ ನಮ್ಮ ಜೀವನ ಅವಲಂಬಿಸಿದೆ. ಶಕ್ತಿಯಿದ್ದ ಸಮಯದಲ್ಲಿ ಗುರಿ ಸಾಧಿಸಬೇಕು ಎಂದು ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರು ಹೇಳಿದರು.
ಕರ್ನಾಟಕ ಸರಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ವಿಠಲ ಪದವಿ ಪೂರ್ವ ಕಾಲೇಜಿನ ವತಿಯಿಂದ ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ’ಆರೋಗ್ಯವಂತ ಭಾರತಕ್ಕಾಗಿ ಆರೋಗ್ಯವಂತ ಯುವ ಶಕ್ತಿ’ ಧ್ಯೇಯವಾಕ್ಯದಡಿಯಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಖರೋಪಾನ್ಯಾಸ ನೀಡಿದರು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಪು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಸದಸ್ಯ ಅಬ್ದುಲ್ ಕರೀಂ, ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಕೆ, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಬಾಲಚಂದ್ರ ಕಟ್ಟೆ, ವಿಠಲ ವಿದ್ಯಾ ಸಂಘದ ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ರಾಧಾಕೃಷ್ಣ ಚೆಲ್ಲಡ್ಕ ಭಾಗವಹಿಸಿದ್ದರು. ಎನ್‌ಎಸ್‌ಎಸ್ ನಾಯಕಿ ಜ್ಯೋತಿ ಉಪಸ್ಥಿತರಿದ್ದರು.
ನಾಯಕ ಶಿವಪ್ರಸಾದ್ ಸ್ವಾಗತಿಸಿದರು. ಶಿಬಿರಾಧಿಕಾರಿ ಅಣ್ಣಪ್ಪ ಸಾಸ್ತಾನ ವಂದಿಸಿದರು. ಜಯಲಕ್ಷ್ಮಿ ನಿರೂಪಿಸಿದರು. ರಮ್ಯ, ಶ್ರವಣ್‌ರಾಜ್, ಪೂರ್ಣಿಮಾ, ವೃಷಭ್‌ನಾಥ್, ಸೂರಜ್ ಮತ್ತು ಅಮೂಲ್ಯ ಅನಿಸಿಕೆ ವ್ಯಕ್ತ ಪಡಿಸಿದರು.

