ವಿಟ್ಲ : ವಿಟ್ಲ ವಿಶ್ವ ಹಿಂದೂ ಪರಿಷತ್ ವತಿಯಿಂದ ಸೆ.2 ರಿಂದ 4 ರ ತನಕ ನಡೆಯುವ 38 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿಟ್ಲದ ಹಿರಿಯ ಛಾಯಾಗ್ರಾಹಕ ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ರಾಮದಾಸ ಶೆಣೈ, ಗೋಪಾಲಕೃಷ್ಣ ಶೆಟ್ಟಿ, ಉದ್ಯಮಿ ಹರೀಶ್ ವಿಟ್ಲ, ಭಾರತ್ ಶಾಮಿಯಾನ್ ಸಂಜೀವ ಪೂಜಾರಿ, ವಿಶ್ವನಾಥ ನಾಯ್ತೋಟು, ಪ್ರಧಾನ ಕಾರ್‍ಯದರ್ಶಿಯಾಗಿ ರೋಹಿತ್ ಕಟ್ಟೆಮನೆ, ಜತೆ ಕಾರ್‍ಯದರ್ಶಿಯಾಗಿ ಸತೀಶ್ ಶೆಟ್ಟಿ ಶಿವಾಜಿನಗರ, ರವಿ ಕೂಡೂರು, ಮನೋಜ್ ಕಾಶಿಮಠ, ರಾಜೇಶ್ ಬೊಬ್ಬೆಕೇರಿ, ಕೋಶಾಧಿಕಾರಿಯಾಗಿ ವಿಶ್ವನಾಥ ಗೌಡ ಕುಳಾಲು ಅವರನ್ನು ಆಯ್ಕೆ ಮಾಡಲಾಯಿತು.
