Thursday, February 13, 2025

ವಿಟ್ಲ: ಸಾರ್ವಜನಿಕ ಇಫ್ತಾರ್ ಕೂಟ

ವಿಟ್ಲ: ವಿ.ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ವಿಟ್ಲದ ವಿ.ಎಚ್.ಕಾಂಪ್ಲೆಕ್ಸ್‌ನಲ್ಲಿ ದಾವತ್ ಎ ರಮದಾನ್ ಕಾರ್‍ಯಕ್ರಮವು ಸೋಮವಾರ ನಡೆಯಿತು.
ವಿಟ್ಲದಲ್ಲಿ ಪ್ರಥಮವಾಗಿ ಆರಂಭಿಸಿದ ಸಾರ್ವಜನಿಕ ಇಫ್ತಾರ್ ಕಾರ್‍ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ದೊರಕಿದ್ದು, ನಾಡಿನ ಸೌಹಾರ್ದತೆ, ಏಕತೆ ಹಾಗೂ ಸಮುದಾಯದ ಸಬಲೀಕರಣಕ್ಕೆ ಯುವಕರ ತಂಡ ದಾವತ್ ಎ ರಮದಾನ್ ಮೂಲಕ ಮುನ್ನುಡಿ ಬರೆದಿದ್ದಾರೆ ಎಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ಹೇಳಿದರು.
ಮಾಲಿಕುದ್ದೀನಾರ್ ಸಂಸ್ಥೆಯ ವಿದ್ಯಾರ್ಥಿ ನೌಫಾಲ್ ಕಡಂಬು ರಂಝಾನ್ ಸಂದೇಶ ನೀಡಿ ಪವಿತ್ರ ತಿಂಗಳ ಮಹತ್ವವನ್ನು ವಿವರಿಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ವಿ.ಎಚ್. ಅಶ್ರಫ್, ಸಂಘಟಕರಾದ ಶಾಕಿರ್ ಅಳಕೆಮಜಲು, ಉಬೈದ್ ವಿಟ್ಲ ಬಝಾರ್, ಕಲಂದರ್ ಪರ್ತಿಪ್ಪಾಡಿ, ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ, ಅದ್ದು ದೀಪಕ್, ಇಸಾಕ್ ಏರೋ, ಅಶ್ಫಾಕ್ ಮೇಗಿನಪೇಟೆ, ಅಶ್ರಫ್ ಸೆಲೆಕ್ಟ್, ಸಂಶುದ್ದೀನ್ ಹೋಂ ಟೆಚ್, ದಾವೂದು ಒಕ್ಕೆತ್ತೂರು, ಅಬೂಬಕರ್ ಅನಿಲಕಟ್ಟೆ, ಅಝೀಝ್ ಕಡಂಬು, ಇಕ್ಬಾಲ್ ಶೀತಲ್, ಉಮರ್ ಎಡ್ವಕೇಟ್, ಹಾರಿಸ್ ಕೊಡಂಗಾಯಿ ಮೊದಲಾದವರು ಉಪಸ್ಥಿತರಿದ್ದರು.
ಶಾಕಿರ್ ಅಳಕೆಮಜಲು ಸ್ವಾಗತಿಸಿ ಕಾರ್‍ಯಕ್ರಮ ನಿರೂಪಿಸಿದರು.

 

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...