ವಿಟ್ಲ: ಪಟ್ಟಣ ಪಂಚಾಯಿತಿಯ 2021-22ನೇ ಸಾಲಿನ 15ನೇ ಹಣಕಾಸು ಯೋಜನೆ 61.90 ಲಕ್ಷದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.


2021-22ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಗರ ವಸತಿ ಯೋಜನೆ ಕಾಮಗಾರಿಯ ಆದೇಶವನ್ನು 11ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಎಸ್. ಎಫ್. ಸಿ. ಶೇ.24-10 ನಿಧಿಯಲ್ಲಿ ಮನೆ ರಿಪೇರಿಗೆ 5 ಫಲಾನುಭವಿಗಳಿಗೆ ವಿತರಣೆ ಚೆಕ್ ವಿತರಣೆ, 1 ಫಲಾನುಭವಿಗೆ ವೈದ್ಯಕೀಯ ವೆಚ್ಚ ನೀಡಲಾಯಿತು. ಪುರ ಸಭಾ ನಿಧಿ ಶೇ. 24-10ರಲ್ಲಿ 2 ಮನೆ ರಿಫೇರಿಗೆ ಚೆಕ್ ವಿತರಣೆ ಮಾಡಲಾಯಿತು.
ಪಟ್ಟಣ ಪಂಚಾಯಿತಿಯ ಸದಸ್ಯರಾದ ಅರುಣ್ ವಿಟ್ಲ, ಹರೀಶ್ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಸಿಬ್ಬಂದಿಗಳು ಉಪಸ್ಥಿತರಿದ್ದರು.












