Wednesday, January 28, 2026

ವಿಟ್ಲ: ಡಿವಿಷನ್ ಕ್ಯಾಂಪಸ್ ಕೊಲೊಕಿಯಮ್ ಹಾಗೂ ಓರ್ಬಿಟ್ ಕ್ಯಾಂಪ್

ವಿಟ್ಲ : ಎಸ್ಸೆಸ್ಸೆಫ್ ಕ್ಯಾಂಪಸ್ ವತಿಯಿಂದ ಡಿವಿಷನ್ ಮಟ್ಟದ ಕ್ಯಾಂಪಸ್ ಕೊಲೊಕಿಯಮ್ ಹಾಗೂ ಓರ್ಬಿಟ್ ಕ್ಯಾಂಪ್ ವಿಟ್ಲದ ಅಶ್-ಅರಿಯ್ಯಾ ಟೌನ್ ಮಸ್ಜಿದ್‌ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಕೋಶಾಧಿಕಾರಿ ಸಿ.ಎಚ್ ಅಬ್ದುಲ್ ಕಾದರ್ ಕೊಡಂಗಾಯಿರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್‍ಯಕ್ರಮವನ್ನು ವಿಟ್ಲ ಡಿವಿಷನ್ ಉಪಾಧ್ಯಕ್ಷರಾದ ರಝಾಕ್ ಪೆಲ್ತಡ್ಕ ಉದ್ಘಾಟಿಸಿ ಮಾತನಾಡಿದರು.
ಡಿವಿಷನ್ ಸಮಿತಿಯ ಕಾರ್‍ಯಕ್ರಮ ಸಂಯೋಜನೆ ಹಾಗೂ ತರಬೇತಿ ವಿಭಾಗದ ಕಾರ್‍ಯದರ್ಶಿ ರಝಾಕ್ ಮುಸ್ಲಿಯಾರ್ ರವರು ಸಾಂಘಿಕ ತರಗತಿ ನಡೆಸಿದರು. ಉನ್ನತ ವಿದ್ಯಾಭ್ಯಾಸ ಹಾಗೂ ನಾನಾ ವೃತ್ತಿಪರ ಕೋರ್ಸ್ ಗಳ ಬಗ್ಗೆ ಶಿಕ್ಷಣ ವಿಭಾಗ ಕಾರ್‍ಯದರ್ಶಿ ಅಶ್ಫಕ್ ಕೊಡಂಗಾಯಿ ಮಾಹಿತಿ ನೀಡಿದರು.
ಕಾರ್‍ಯಕ್ರಮದಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಹಾಜಿ ಬೈರಿಕಟ್ಟೆ, ಡಿವಿಷನ್ ನಾಯಕರಾದ ರಹೀಂ ಸಖಾಫಿ, ವಿ.ಎಂ ಅಬೂಬಕ್ಕರ್ ಸಖಾಫಿ ಮಂಗಳಪದವು ಹಾಗೂ ಕ್ಯಾಂಪಸ್ ಸಮಿತಿ ಸದಸ್ಯರಾದ ಸೈಫುದ್ದೀನ್ ಅಳಕೆಮಜಲು, ಇಬ್ರಾಹಿಂ ಮೂಡಂಬೈಲು, ಅಶ್ರಫ್ ಗೋಳಿಕಟ್ಟೆ, ಇಬ್ರಾಹಿಂ ಕೋಡಪದವು, ವಿಟ್ಲ ಸೆಕ್ಟರ್ ಕ್ಯಾಂಪಸ್ ಕಾರ್‍ಯದರ್ಶಿ ಉನೈಸ್ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಡಿವಿಷನ್ ಕ್ಯಾಂಪಸ್ ಕಾರ್‍ಯದರ್ಶಿ ಶಾಹೀರ್ ಕೊಳಂಬೆ ಸ್ವಾಗತಿಸಿ, ವಂದಿಸಿದರು.

More from the blog

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...