ವಿಟ್ಲ: ಬಿಜೆಪಿ ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ ವಿಟ್ಲ ಮೇಗಿನಪೇಟೆಯ ಒಂಟಿ ಮಹಿಳೆಯನ್ನು ಕಟ್ಟಿಹಾಕಿ ಹಲ್ಲೆ ನಡೆಸಿ ದರೋಡೆ ನಡೆಸಿ ಪರಾರಿಯಾಗಿದ್ದ ಅರೋಪಿಯನ್ನು ಅತೀ ಶೀಘ್ರವಾಗಿ ಬಂಧಿಸುವಲ್ಲಿ ಕಾರ್ಯನಿರ್ವಹಿಸಿದ ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕ ಎಸ್. ವಿನೋದ್ ಕುಮಾರ್ ರೆಡ್ಡಿ ಹಾಗೂ ಪೊಲೀಸ್ ತಂಡವನ್ನು ಅಭಿನಂದಿಸಿ ಗೌರವಿಸಲಾಯಿತು.


ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಪ್ರಭಾರಿ ಮೋಹನ್ ದಾಸ್ ಉಕ್ಕುಡ, ಕಾರ್ಯದರ್ಶಿ ಕರುಣಾಕರ ನಾಯ್ತೋಟು, ಪ್ರಮುಖರಾದ ರಾಮ್ ದಾಸ್ ಶೆಣೈ ವಿಟ್ಲ, ಹರೀಶ್ ವಿಟ್ಲ, ಕೃಷ್ಣ ಮುದೂರು ಉಪಸ್ಥಿತರಿದ್ದರು.












