Wednesday, February 12, 2025

’ಕ್ರೋಢಿಕರಿಸಿದ ಸಂಪತ್ತನ್ನು ಧರ್ಮ ಕಾರ್‍ಯದಲ್ಲಿ ವಿನಿಯೋಗಿಸಬೇಕು’-ಶ್ರೀ ಮಾತಾನಂದಮಯಿ

ವಿಟ್ಲ: ಜೀವನದಲ್ಲಿ ಧರ್ಮ ಸಂಗ್ರಹ ಶ್ರೇಷ್ಠವಾದ ಕಾರ್‍ಯವಾಗಿದೆ. ಕ್ರೋಢಿಕರಿಸಿದ ಸಂಪತ್ತನ್ನು ಧರ್ಮ ಕಾರ್‍ಯದಲ್ಲಿ ವಿನಿಯೋಗಿಸಬೇಕು. ವ್ಯಕ್ತಿಯ ಅಂತರಂಗ ವಿಕಸನಕ್ಕೆ ಬ್ರಹ್ಮಕಲಶದಂತಹ ಕಾರ್‍ಯಗಳು ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಹೇಳಿದರು.
ಅವರು ಗುರುವಾರ ಕೇಪು ಖಂಡಿಗ ಶ್ರೀ ಕೈಲಾಸೇಶ್ವರ ದೇವ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ಮಾತಾಪಿತರ ಸಂಗಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಭಗವಂತನ ಸ್ಮರಣೆಯಲ್ಲಿ ಮಾಡುವ ಕೆಲಸ ಕಾರ್‍ಯಗಳಿಗೆ ಸದಾ ಅನುಗ್ರಹವಿರುತ್ತದೆ ಎಂದು ತಿಳಿಸಿದರು.
ಕನ್ಯಾನ ಭಾರತ ಸೇವಾಶ್ರಮದ ಕಾರ್‍ಯದರ್ಶಿ ಈಶ್ವರ ಭಟ್ ಮಾತಾಡಿ ಮಕ್ಕಳು ಹಣದ ಹಿಂದೆ ಹೋಗಿ ತಂದೆ ತಾಯಿಯನ್ನು ನಿರ್ಲಕ್ಷಿಸುವ ಕಾರ್‍ಯ ನಡೆಯುತ್ತಿದೆ. ಮಕ್ಕಳನ್ನು ಬೆಳೆಸುವ ರೀತಿಯ ಬಗ್ಗೆ ಪೋಷಕರು ಗಮನಕೊಡಬೇಕು. ಪಠ್ಯದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮೊಕ್ತೇಸರರಾದ ಪದ್ಮಿನಿ ರಾಮ ಭಟ್ ಆಲಂಗಾರು, ಶಕುಂತಳಾ ಶೆಟ್ಟಿ, ಭವಾನಿ ರೈ ಕೊಲ್ಯ, ಬೇಬಿ ಆರ್. ಶೆಟ್ಟಿ, ಕೆ. ದೇವದಾಸ ರೈ ಕೇಪು ಗುತ್ತು, ಕೇಪು ಶ್ರೀ ಮಹಮ್ಮಾಯಿ ಮರಾಟಿ ಸಂಘದ ಅಧ್ಯಕ್ಷ ಗೋವಿಂದ ನಾಯ್ಕ ನೆಗಳಗುಳಿ, ವಿಟ್ಲ ಮರಾಠಿ ಯುವವೇದಿಕೆ ಅಧ್ಯಕ್ಷ ಜೀವನ ಅನ್ನಮೂಲೆ, ಪ್ರೇಮಲತಾ ಕಟ್ಟೆ, ಕೆಯ್ಯೂರು ನಾರಾಯಣ ಭಟ್, ಆದರ್ಶ ಯುವಕ ಮಂಡಲದ ನವೀನ್ ನೀರ್ಕಜೆ, ಸೀತಾರಾಮ ಆಳ್ವ ಚೆಲ್ಲಡ್ಕ, ದೇವದಾಸ ಅಡ್ಯನಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಉಪಸ್ಥಿತರಿದ್ದರು.
ಆಡಳಿತ ಮೊಕ್ತೇಸರ ರವೀಶ್ ಕೆ. ಎನ್. ಖಂಡಿಗ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್‍ಯದರ್ಶಿ ಸುರೇಶ್ ನಾಯ್ಕ ಕೋಡಂದೂರು ವಂದಿಸಿದರು. ಕಾರ್‍ಯಕ್ರಮ ನಿರ್ವಹಣಾ ಸಮಿತಿಯ ಸುರೇಶ್ ಶೆಟ್ಟಿ ಪಡಿಬಾಗಿಲು ನಿರೂಪಿದರು.

More from the blog

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...