ವಿಟ್ಲ: ಮಕ್ಕಳ ಲೋಕ ಕ.ಸಾ.ಪ ಬಂಟ್ವಾಳ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಶಿಕ್ಷಣ ತಜ್ಞ ವಿಟ್ಲದ ಕೆ. ವಿಠಲ ಶೆಟ್ಟಿ ಆಯ್ಕೆಯಾಗಿರುವರು.
ಉಪಾಧ್ಯಕ್ಷೆಯಾಗಿ ವಿಲ್ಮ ಸೀಕ್ವೇರಾ, ಕೋಶಾಧಿಕಾರಿಯಾಗಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮೇಶ ಎಂ. ಬಾಯಾರು, ಕಾರ್ಯದಶಿಯಾಗಿ ಶಿವರಾಮ ಭಟ್ ನೆಡ್ಲೆ, ಜೊತೆ ಕಾರ್ಯದರ್ಶಿಯಾಗಿ ಗಂಗಮ್ಮ ಪಿ. ಮಣಿಲ ಆಯ್ಕೆಯಾಗಿರುವರು. ಸದಸ್ಯರಾಗಿ ವಿಶ್ವನಾಥ ಗೌಡ ಕುಳಾಲು, ರಾಜಾರಾಮ ವರ್ಮ ವಿಟ್ಲ, ಸೀತಾಲಕ್ಷ್ಮೀ ವಿಟ್ಲ, ಸುರೇಖಾ ಯಳವಾರ, ಮಾಲತಿ ಕಾನತಡ್ಕ, ಈಶ್ವರ ಪ್ರಸಾದ ನೀರ್ಪಾಜೆ, ಗೋಪಾಲಕೃಷ್ಣ ಅನಂತಾಡಿ ಆಯ್ಕೆಯಾಗಿರುವರು.
ಕ.ಸಾ.ಪ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಮೋಹನರಾವ್ ಕೊಯಿಲ, ಹಿಂದಿನ ಅಧ್ಯಕ್ಷರುಗಳಾದ ಉದಯಶಂಕರ ನೀರ್ಪಾಜೆ, ಜಯಾನಂದ ಪೆರಾಜೆ, ವಿ.ಮ.ಭಟ್, ಅನಂತಕೃಷ್ಣ ಹೆಬ್ಬಾರ್, ವಿಟ್ಲ, ಮಹಾಬಲ ಭಟ್ ನೆಗಲಗುಳಿ, ಭಾಸಕರ ಅಡ್ವಳ ಗೌರವ ಸಲಹೆಗಾರರಾಗಿ ಮುಂದುವರಿಯಲಿರುವರು.
ಹದಿನೈದನೇ ವರ್ಷದ ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವು ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಇದಲ್ಲದೆ ಅಪೇಕ್ಷಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಂದಿನಂತೆಯೇ ಸಾಹಿತ್ಯ ರಚನೆ ಪ್ರೇರಣಾ ಕಮ್ಮಟಗಳನ್ನು ಉಚಿತವಾಗಿ ನಿರ್ವಹಿಸಲಾಗುತ್ತದೆ. ಇದಕ್ಕಾಗಿ 9480368457ನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

