ವಿಟ್ಲ: ಬಂಟ್ವಾಳ ಮೆಸ್ಕಾಂ ವಿಭಾಗಕ್ಕೆ ಸಂಬಂಧಪಟ್ಟಂತೆ ಸುಮಾರು 120 ಮಂದಿ ಗುತ್ತಿಗೆ ವಿದ್ಯುತ್ ಮಾಪಕ ಓದುಗರಿಗೆ ಮಾಪಕ ಓದುವಿಕೆಯ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರು ಏಪ್ರಿಲ್ ತಿಂಗಳ ವೇತನವನ್ನು ಮೀಟರ್ ರೀಡರ್‍ಗಳಿಗೆ ನೀಡದ ಕಾರಣ ಮೀಟರ್ ರೀಡಿಂಗ್ ಅನ್ನು ಸ್ಥಗಿತಗೊಳಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಲಾಕ್ ಡೌನ್ ಇದ್ದುದರಿಂದ ನಮಗೆ ಸ್ಥಳಕ್ಕೆ ಮೀಟರ್ ರೀಡಿಂಗ್ ಮಾಡಲು ಅಸಾಧ್ಯವಾಗಿದ್ದು, ಈ ಬಗ್ಗೆ ಸರ್ಕಾರದ ಆದೇಶದಂತೆ ಲಾಕ್‍ಡೌನ್ ಇರುವ ಸಂದರ್ಭದಲ್ಲಿ(ಏಪ್ರಿಲ್‍ನಲ್ಲಿ) ಗುತ್ತಿಗೆ ನೌಕರರು ಕೆಲಸ ಮಾಡಲು ಕೆಲಸ ಮಾಡಲು ಅಸಾಧ್ಯವಾದರೂ ಗುತ್ತಿಗೆದಾರರು ಮೀಟರ್ ರೀಡರ್‍ಗಳು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಿ ಸರಕಾರದದ ಆದೇಶದಂತೆ ಅವರಿಗೆ ವೇತನ ನೀಡುವಂತೆ ಸರಕಾರದ ಸುತ್ತೋಳೆಯಲ್ಲಿ ತಿಳಿಸಲಾಗಿದೆ.
ಆದರೆ ನಮಗೆ ಮೇ ತಿಂಗಳಿನಲ್ಲಿ ರೀಡಿಂಗ್ ಮಾಡಲು ಏಪ್ರಿಲ್ ತಿಂಗಳ ವೇತನ ನೀಡದೇ ಇರುವುದರಿಂದ ಲಾಕ್‍ಡೌನ್‍ನ ಈ ಸಂದರ್ಭದಲ್ಲಿ ಕೈಯಲ್ಲಿ ಹಣ ಇಲ್ಲದೇ ಮತ್ತು ಬಸ್ಸಿನ ವ್ಯವಸ್ಥೆ ಕೂಡಾ ಇಲ್ಲದೇ ದುಬಾರಿ ಹಣ ಕೊಟ್ಟು ಕರ್ತವ್ಯಕ್ಕೆ ಹಾಜರಾಗಬೇಕಾಗುವ ಅನಿವಾರ್ಯತೆ ಇದೆ. ಆದರೂ ನಾವು ಏಪ್ರಿಲ್ ತಿಂಗಳ ವೇತನವನ್ನು ನೀಡುತ್ತಾರೆಂಬ ಭರವಸೆಯಿಂದ ನಾವು ಏಪ್ರಿಲ್ ತಿಂಗಳ ಮಾಪಕ ಓದುವಿಕೆಯ ಕೆಲಸವನ್ನು ಮಾಡಿರುತ್ತೇವೆ. ಆದರೆ ಈಗ ನಮ್ಮ ಏಜನ್ಸಿಯ ಮುಖ್ಯಸ್ಥರು ಏಪ್ರಿಲ್ ತಿಂಗಳ ವೇತನ ಕೊಡಲು ಸಾಧ್ಯವುಲ್ಲ ಎಂದು ಹೇಳಿದ್ದಾರೆ, ಕಳೆದ ತಿಂಗಳ ವೇತನ ಸಿಕ್ಕಿದ ಬಳಿಕವೇ ನಾವು ಮೀಟರ್ ರೀಡರ್ ಮಾಡುವುದಾಗಿ ತೀರ್ಮಾನಿಸಿದ್ದೇವೆ ಎಂದು ಬಂಟ್ವಾಳ ಮೆಸ್ಕಾಂ ವಿಭಾಗದ ಮಾಪಕ ಓದುಗಾರರು ತಿಳಿಸಿದ್ದಾರೆ.


