Tuesday, January 27, 2026

ವಲಸೆ ಕಾರ್ಮಿಕರ ಸಮಸ್ಯೆ ಸ್ಪಂದನೆ: ಬಂಟ್ವಾಳ ಶಾಸಕರಿಂದ ಭರವಸೆ

ವಿಟ್ಲ: ಕೊಳ್ನಾಡು ಗ್ರಾಮದಲ್ಲಿ ಅತಂತ್ರರಾಗಿ ಉಳಿದುಕೊಂಡಿರುವ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆಗೆ ಸಹಕರಿಸುವ ಬಗ್ಗೆ ಬಂಟ್ವಾಳ ಶಾಸಕರು ಭರವಸೆ ನೀಡಿದ್ದಾರೆ.
ವಲಸೆ ಕಾರ್ಮಿಕರನ್ನು ಕಳುಹಿಸಿ ಕೊಡುವ ಸಂದರ್ಭದಲ್ಲಿ ಕೊಳ್ನಾಡು ಹಾಗೂ ಇತರ ಗ್ರಾಮದಲ್ಲಿ ಬಾಕಿ ಉಳಿದಿರುವ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿ ಕೊಡುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು ಶ್ರೀಘ್ರದಲ್ಲೇ ಅವರಿಗೆ ವ್ಯವಸ್ಥೆ ಮಾಡಲಾಗುವುದೆಂದು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಶಾಸಕ ರಾಜೇಶ್ ನಾಯ್ಕ್ ಭರವಸೆ ನೀಡಿದ್ದಾರೆ.
ಬಂಟ್ವಾಳದಿಂದ ಈಗಾಗಲೇ ಹೆಚ್ಚಿನ ಜನರನ್ನು ಕಳುಹಿಸಿ ಕೊಡಲಾಗಿದೆ. ಜಿಲ್ಲಾಧಿಕಾರಿಗಳ ವ್ಯವಸ್ಥೆಯಲ್ಲಿ ಇದ್ದ ಸಂಪನ್ಮೂಲಗಳು ಈಗಾಗಲೇ ಉಪಯೋಗಗೊಂಡಿದ್ದು, ಮುಂದಿನ ಸಂಪನ್ಮೂಲಕ್ಕೆ ಕಾಯಬೇಕಿದೆ ಮತ್ತು ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಮಾತ್ರ ಕಳುಹಿಸಿಕೊಡಬೇಕಾದ ನಿಯಮ ವಿರುವುದರಿಂದ ಬದಲಿ ವ್ಯವಸ್ಥೆ ಕಷ್ಟ ಸಾಧ್ಯವಾಗಿದೆಯೆಂದು ತಿಳಿಸಿದ್ದಾರೆ. ಅಲ್ಲಿಯವರೆಗೆ ವಲಸೆ ಕಾರ್ಮಿಕರ ಅಹಾರ-ಸಾಮಗ್ರಿಗಳ ವ್ಯವಸ್ಥೆಯನ್ನು ಮಾಡಲಾಗುವುದೆಂದು ಶಾಸಕರು ಭರವಸೆ ನೀಡಿದ್ದು, ಶಾಸಕರ ಸ್ಪಂದನೆಗೆ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಕೃತಜ್ಞತೆ ಸಲ್ಲಿಸಿದ್ದಾರೆ.

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...