ವಿಟ್ಲ: ಸಾಲೆತ್ತೂರು ಗ್ರಾಮ ಪಂಚಾಯತ್ ಗೆ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಇವರು ಭೇಟಿ ನೀಡಿದರು ಈ ಸಂದರ್ಭದಲ್ಲಿ ಸಾಲೆತ್ತೂರು ಗ್ರಾಮದಲ್ಲಿ ಸುಮಾರು 21 ಜನ ನಿರಾಶ್ರಿತರು ಇದ್ದಾರೆ ಮಾಹಿತಿ ದೊರತ ಹಿನ್ನಲೆಯಲ್ಲಿ ಶಿಬಿರಕ್ಕೆ ಭೇಟಿ ನೀಡಿ ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ಸಲಹೆ ನೀಡಿದರು.
ಅವರನ್ನು ತಾತ್ಕಾಲಿಕವಾಗಿ ಅವರನ್ನು ಸಾಲೆತ್ತೂರು ಶಾಲೆಯ ಕೊಠಡಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದರು.
ಮತ್ತು ಅವರಿಗೆ ಹಾಲು, ಅಕ್ಕಿಯ ವ್ಯವಸ್ಥೆಗೆ ಸಹಕಾರ ನೀಡುವುದಾಗಿ ತಿಳಿಸಿದರು. ಇವರೊಂದಿಗೆ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಕರಣಿಕರು, ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.


