ಬಂಟ್ವಾಳ: ದಾಖಲಾತಿ ಇಲ್ಲದೆ ತಿರುಗಾಡುತ್ತಿದ್ದ ಮೂರು ವಾಹನಗಳನ್ನು ಜಪ್ತಿ ಮಾಡಿದ ವಿಟ್ಲ ಎಸ್.ಐ.ವಿನೋದ್ ರೆಡ್ಡಿ.
ಇಂದು 3 ಗಂಟೆಯ ಬಳಿಕ ವಿಟ್ಲ ಆಸುಪಾಸಿನಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದ ವಾಹನ ತಪಾಸಣೆ ಮಾಡುವ ವೇಳೆ ಎರಡು ಬೈಕ್ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮೂರು ವಾಹನಗಳಿಗೂ ದಾಖಲಾತಿ ಇಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಖಲಾತಿ ಇಲ್ಲದೆ ತಿರುಗಾಟ ನಡೆಸುತ್ತಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಂಡ ವಿಟ್ಲ ಎಸ್.ಐ.ವಿನೋದ್ ರೆಡ್ಡಿ


