ವಿಟ್ಲ: ಮಂಗಳೂರು ಗಾನ ನೃತ್ಯ ಅಕಾಡೆಮಿಯ ಸುಳ್ಯ ಶಾಖೆಯ ರಜತ ಸಂಭ್ರಮ ಆರೋಹಣ ೨೦೨೦ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಅವರನ್ನು ಸಮ್ಮಾನಿಸಲಾಯಿತು.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಚಿದಾನಂದ ಕೆ.ವಿ, ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ಆಡಳಿತಾಧಿಕಾರಿ ನಿತ್ಯಾನಂದ ಮುಂಡೋಡಿ, ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ಕರ್ನಾಟಕ ಕಲಾಶ್ರೀ ಗುರು ಚಂದ್ರಶೇಖರ ನಾವಡ, ರಂಗಾಯಣದ ಸದಸ್ಯ ಜೀವನ್‌ರಾಮ್ ಸುಳ್ಯ, ನಟಿ, ನೃತ್ಯ ಕಲಾವಿದೆ ಡಾ.ಸೀತಾ ಕೋಟೆ, ಗಾನ ನೃತ್ಯ ಅಕಾಡೆಮಿ ನಿರ್ದೇಶಕಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಉಪಸ್ಥಿತರಿದ್ದರು.














