ವಿಟ್ಲ: ವಿಟ್ಲ ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಜೀರ್ಣೋದ್ಧಾರ ಕಾರ್‍ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆಯಾಗಿ ನೀಡಿದ ರೂಪಾಯಿ ಒಂದು ಲಕ್ಷ ರೂ. ಮೊತ್ತದ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಅವರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಕೆ. ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿಟ್ಲ ವಲಯ ಮೇಲ್ವಿಚಾರಕಿ ಜಯಶ್ರೀ, ಸೇವಾಪ್ರತಿನಿಧಿ ಹೇಮಲತಾ ಚಿದಾನಂದ, ಜೀರ್ಣೋದ್ಧಾರ ಸಮಿತಿ ಕಾರ್‍ಯಾಧ್ಯಕ್ಷ ಬಾಬು ಕೊಪ್ಪಳ, ಕಾರ್‍ಯದರ್ಶಿ ಶೈಲೇಶ್ ವಿ, ಲಕ್ಷ್ಮಣ ಆರ್.ಎಸ್ ಮೊದಲಾದವರು ಉಪಸ್ಥಿತರಿದ್ದರು.
