ವಿಟ್ಲ: ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ ಹಾಗೂ ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಉಂದುಲುಸ್-19 ಪ್ರತಿನಿಧಿ ಸಮಾವೇಶದ ಪ್ರಚಾರ ಸಭೆ ವಿಟ್ಲದ ಅಶ್-ಅರಿಯ್ಯಾ ಟೌನ್ ಮಸೀದಿಯಲ್ಲಿ ನಡೆಯಿತು.
ಎಸ್ಸೆಸ್ಸಫ್ ವಿಟ್ಲ ಡಿವಿಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದಾರುಲ್ ಅಶ್-ಅರಿಯ್ಯಾ ವ್ಯವಸ್ಥಾಪಕರಾದ ಮಹಮ್ಮದಲಿ ಸಖಾಫಿ ಸುರಿಬೈಲು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಜ್ಲಿಸ್ ಗಾಣೆಮಾರ್ ಮುದರ್ರಿಸ್, ಇಸ್ಮಾಯಿಲ್ ಸಅದಿ ಮಾಚಾರ್ ಉಂದುಲುಸ್ ಬಗ್ಗೆ ಮಾಹಿತಿ ನೀಡಿದರು. ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ದುಅ ನಡೆಸಿಕೊಟ್ಟರು.
ಎಸ್.ಎಂ.ಎ ಪುತ್ತೂರು ವಿಭಾಗದ ಅಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಹಾಜಿ ಬೈರಿಕಟ್ಟೆ ಮಾತನಾಡಿದರು.
ಎಸ್.ವೈ.ಎಸ್ ವಿಟ್ಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಪಾಡಿ, ಎಸ್.ವೈ.ಎಸ್ ನಾಯಕರಾದ ಹಮೀದ್ ಸಖಾಫಿ ಕೊಡಂಗಾಯಿ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಇಬ್ರಾಹಿಮ್ ಮುಸ್ಲಿಯಾರ್ ಕೊಡಂಗಾಯಿ ಹಾಗೂ ಎಸ್.ಜೆ.ಯು ನಾಯಕರಾದ ಸುನ್ನೀ ಫೈಝಿ ಪೆರುವಾಯಿ, ಅಲ್-ಹಾಜ್ ಇಬ್ರಾಹಿಂ ಮದನಿ ಕಂಬಳಬೆಟ್ಟು, ಹಾಫಿಳ್ ಶರೀಫ್ ಸಖಾಫಿ ಉಕ್ಕುಡ, ಎಸ್.ಎಂ.ಎ ನಾಯಕರಾದ ಕಾಸಿಂ ಸಖಾಫಿ ಕೊಳಂಬೆ, ಉಸ್ಮಾನ್ ಹಾಜಿ ಟಿಪ್ಪುನಗರ, ಟೌನ್ ಮಸ್ಜಿದ್ ಇಮಾಂ ಅಬ್ಬಾಸ್ ಮದನಿ, ಡಿವಿಷನ್ ನಾಯಕರಾದ ಸಿ.ಎಚ್ ಅಬ್ದುಲ್ ಕಾದರ್ ಕೊಡಂಗಾಯಿ, ಶಾಹಿರ್ ಕೊಳಂಬೆ, ರಹೀಂ ಸಖಾಫಿ, ಅಶ್ಫಾಕ್ ಕೊಡಂಗಾಯಿ, ರಝಾಕ್ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಹಿಮಮಿ ಸಖಾಫಿ ಸ್ವಾಗತಿಸಿ, ವಂದಿಸಿದರು.
