Friday, July 11, 2025

ಕೊಳ್ನಾಡಿನಲ್ಲಿ ಮಕ್ಕಳ ಗ್ರಾಮ ಸಭೆ

ವಿಟ್ಲ: ಮಕ್ಕಳಿಗೆ ತನ್ನದೇ ಆದಂತಹ ಹಕ್ಕುನ್ನು ಸಂವಿಧಾನತ್ಮಾಕವಾಗಿ ಸರಕಾರ ನೀಡಿದೆ. ಅದರ ಜೊತೆಗೆ ರಕ್ಷಣೆಯನ್ನು ಕೊಡುವಂತಹದ್ದು ಸಂಬಂಧಪಟ್ಟ ಇಲಾಖಾ ಜವಾಬ್ದಾರಿ ಇದರಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಶಿಕ್ಷಕರ ಮೂಲಕ ಗ್ರಾಮ ಪಂಚಾಯತ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಧೈರ್ಯವಾಗಿ ದೂರು ನೀಡಿ ಎಂದು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.
ಅವರು ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯನ್ನು ಉದ್ಫಾಟಿಸಿ ಮಾತನಾಡಿದರು. ಮಕ್ಕಳ ಆರೋಗ್ಯ, ಶಿಕ್ಷಣ, ಅಂಗನವಾಡಿ ಹಾಗೂ ಪೋಲಿಸ್ ಇಲಾಖೆಗಳು ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿವೆ ಇವುಗಳ ಮಾಹಿತಿಯನ್ನು ಪಡೆದು ದುಶ್ಚಟಕ್ಕೆ ಬಲಿಯಾಗದೇ ಗುಣಮಟ್ಟದ ಶಿಕ್ಷಣ ಪಡೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕಾಡುಮಠ ಪ್ರೌಢಶಾಲೆಯ ವಿದ್ಯಾರ್ಥಿನಿ ಶಬಾನ ರವರು ವಹಿಸಿದ್ದರು. ಸಭೆಯಲ್ಲಿ ಮಕ್ಕಳು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ ನೀಡಿದರು. ಕಟ್ಟತ್ತಿಲ, ನಾರ್ಶ ,ಸುರಿಬೈಲು, ಕಾಡುಮಠ, ನೂಜಿಬೈಲು ಶಾಲೆಯ ಮಕ್ಕಳು ಮೂಲ ಸೌಕರ್ಯಗಳ ಬಗ್ಗೆ ಗ್ರಾಮ ಪಂಚಾಯತ್ ನ ಗಮನ ಸೆಳೆದರು. ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವುದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು.
ಶಿಕ್ಷಣಾ ಇಲಾಖಾ ಸಂಯೋಜಕಿ ಇಂದಿರಾ, ಅಂಗನವಾಡಿ ಮೇಲ್ವಿಚಾರಕಿ ರೇಣುಕಾ, ಆರೋಗ್ಯ ಸಹಾಯಕಿ ಹರಿಣಾಕ್ಷಿ ತಮ್ಮ ಇಲಾಖಾ ಮಾಹಿತಿ ನೀಡಿದರು. ಗ್ರಾ. ಪಂ.  ಸದಸ್ಯರಾದ ಜಯಂತಿ ಎಸ್.ಪೂಜಾರಿ, ಟಿ ಯೂಸುಫ್, ಐರಿನ್ ಡಿ,ಸೋಜ, ಗುರುವಪ್ಪ ಮುಗೇರ, ಇಂದ್ರಾವತಿ ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ಬಿ ಸ್ವಾಗತಿಸಿ, ವಂದಿಸಿದರು.

 

More from the blog

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...

ರಾಷ್ಟ್ರ, ಧರ್ಮಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವುದೇ ನಿಜವಾದ ಗುರುದಕ್ಷಿಣೆ – ಮಂಜುಳಾ ಗೌಡ

ಬಂಟ್ವಾಳ : ಪ್ರಸ್ತುತ ಹಿಂದೂ ಧರ್ಮದ ಮೇಲಿನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹಿಂದೂಗಳ ಸಂಘಟನೆ ಆವಶ್ಯಕತೆಯಿದೆ. ಆದರೆ ‘ಸಾಧನೆ ಮತ್ತು ಧರ್ಮ' ಇದು ಸಂಘಟನೆಯ ಅಡಿಪಾಯವಾಗಿದ್ದರೆ ಮಾತ್ರ ರಾಷ್ಟ್ರ-ಧರ್ಮ ಕಾರ್ಯದ ಕಟ್ಟಡ ಭದ್ರವಾಗಿರಲು ಸಾಧ್ಯ....

ಬಂಟ್ವಾಳ ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ಉಮೇಶ್ ಗೌಡ ಮಾಡತ್ತೇಲು ಆಯ್ಕೆ

ಬಂಟ್ವಾಳ : ತುಳುನಾಡಿನ ಅಸ್ಮಿತೆಯ ಚಳುವಳಿಯಾಗಿ ಗುರುತಿಸಲ್ಪಟ್ಟ ತುಳುವ ಮಹಾಸಭೆ ತನ್ನ ಶತಮಾನೋತ್ಸವದ ಸಂಧರ್ಭದಲ್ಲಿ ಹೊಸ ಚಟುವಟಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಇಂತಹ ನಿರ್ಣಾಯಕ ಸಮಯದಲ್ಲಿ, ಬಂಟ್ವಾಳ ತಾಲೂಕು ಘಟಕದ ಸಂಚಾಲಕರಾಗಿ ಸಮಾಜ ಶಾಸ್ತ್ರದಲ್ಲಿ...

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ : ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ..

ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ...