ವಿಟ್ಲ: ಜ.8 ರಂದು ನಿಧನ ಹೊಂದಿದ ಹಿರಿಯ ವಿದ್ವಾಂಸ ,ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷ ಮಿತ್ತಬೈಲ್ ಜಬ್ಬಾರ್ ಉಸ್ತಾದ್ರವರ ಅನುಸ್ಮರಣೆ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಖತೀಬ್ ಅಬ್ದುಸ್ಸಲಾಂ ಲತೀಫಿ ಉಸ್ತಾದರ ಬಗ್ಗೆ ನುಡಿನಮನ ಸಲ್ಲಿಸಿದರು. ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮೇಗಿನಪೇಟೆ, ಕಾರ್ಯದರ್ಶಿ ಇಬ್ರಾಹಿಂ ಕೊಲ್ನಾಡ್,ಸದಸ್ಯ ವಿ.ಕೆ.ಎಂ.ಹಂಝ,ಶಾಲೆಯ ಸದರ್ ಉಮರ್ ಸಅದಿ, ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಶೆರೀಫ್ ಮೇಗಿನಪೇಟೆ, ಇಸ್ಮಾಯಿಲ್ ಮುಸ್ಲಿಯಾರ್, ಇಸ್ಮಾಯಿಲ್ ಹನೀಫಿ,ಅಬೂಬಕರ್ ಮುಸ್ಲಿಯಾರ್, ಮಹಮ್ಮದ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತಿದ್ದರು.
