Tuesday, January 27, 2026

ಡಿ.11-13: ಸುರಿಬೈಲು ಉಸ್ತಾದರ ಆಂಡ್ ನೇರ್ಚೆ- ಹನೀಫಿ ಸನದುದಾನ ಮಹಾ ಸಮ್ಮೇಳನ

ವಿಟ್ಲ: ಬಂಟ್ವಾಳ ತಾಲೂಕಿನ ಸುರಿಬೈಲು ದಾರುಲ್ ಅಶ್ ಅರಿಯಃ ಎಜುಕೇಶನಲ್ ಸೆಂಟರ್‌ನ ಸ್ಥಾಪಕರಾದ ಶೈಖುನಾ ಮರ್‌ಹೂಂ ಸುರಿಬೈಲು ಉಸ್ತಾದರ ೧೮ನೇ ಆಂಡ್ ನೇರ್ಚೆ ಹಾಗೂ ಶೈಖುನಾ ಪಿಎ ಉಸ್ತಾದರ ಅನುಸ್ಮರಣೆ ಹನೀಫಿ ಸನದುದಾನ ಮಹಾ ಸಮ್ಮೇಳನ ಡಿ.11-13 ರ ತನಕ ನಡೆಯಲಿದೆ ಎಂದು ದಾರುಲ್ ಅಶ್ ಅರಿಯಃದ ಸ್ವಾಗತ ಸಮಿತಿ ಸಂಚಾಲಕ ಕೆ.ಎ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ತಿಳಿಸಿದರು.
ಅವರು ಸೋಮವಾರ ವಿಟ್ಲದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಸುರಿಬೈಲು ದಾರುಲ್ ಅಶ್ ಅರಿಯಃ ಎಜುಕೇಶನಲ್ ಸೆಂಟರ್‌ನಲ್ಲಿ ಇಂಗ್ಲೀಷ್ ಮೀಡಿಯಂ ಸ್ಕೂಲ್, ವುಮೆನ್ಸ್ ಕಾಲೇಜು, ಹಿಫುಲ್‌ಳು ಕುರ್‌ಆನ್ ಕಾಲೇಜು, ಅನಾಥ ನಿರ್ಗತಿಕರ ಮಂದಿರ ಕಾರ್ಯಾಚರಿಸುತ್ತಿದೆ. ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಚಿತವಾಗಿ ಧಾರ್ಮಿಕ ಲೌಕಿಕ, ವಿದ್ಯಾಭ್ಯಾಸ, ಊಟೋಪಾಚಾರ ಮತ್ತು ವಸತಿಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಡಿ.೧೧ರಂದು ಬುಧವಾರ ಸಂಜೆ ಸಯ್ಯದ್ ಶಿಹಾಬುದ್ದೀನ್ ಮದಕ ಅವರ ನೇತೃತ್ವದಲ್ಲಿ ಮರ್‌ಹೂಂ ಸುರಿಬೈಲು ಉಸ್ತಾದರ ಮಕಬರ ಝಿಯಾರತ್ ಕಾರ್ಯಕ್ರಮ ಆರಂಭವಾಗಲಿದೆ. ಕೋಯ ಕಾಪಾಡ್ ಹಾಗೂ ಸಂಗಡಿಗರು ಕೋಝಿಕ್ಕೋಡ್ ಕೇರಳ ಅವರ ನೇತೃತ್ವದಲ್ಲಿ ಮಹ್‌ಳರತು ರಿಫಾಈಯ್ಯ ಮಜ್ಲೀಸ್, ಜಲಾಲಿಯ್ಯ ರಾತೀಬು ನಡೆಯಲಿದೆ.
12ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ವೈದ್ಯಕೀಯ ಶಿಬಿರ, ಸಂಜೆ 6 ಗಂಟೆಗೆ ಸೌಹಾರ್ದ ಸಂಗಮ, ರಾತ್ರಿ 8 ಗಂಟೆಗೆ ಬಾಯಾರು ತಂಙಳ್ ಅವರ ನೇತೃತ್ವದಲ್ಲಿ ಆತ್ಮೀಯ ಮಜ್ಲೀಸ್ ನಡೆಯಲಿದೆ.
13 ರಂದು ಮಧ್ಯಾಹ್ನ ಸಯ್ಯದ್ ಕುಂಬೋಳ್ ತಂಙಳ್ ಅವರ ನೇತೃತ್ವದಲ್ಲಿ ಸ್ಥಾನ ವಸ್ತ್ರ ವಿತರಣೆ, ಸಂಜೆ 4 ಗಂಟೆಗೆ ಬೋಳಂತೂರುನಿಂದ ಅಶ್ ಅರಿಯಃಕ್ಕೆ ಸಂದಲ್ ಮೆರವಣಿಗೆ ಬಳಿಕ ಸಮಾರೋಪ ಸಮ್ಮೇಳನದಲ್ಲಿ ಕೂರ ತಂಙಳ್ ನೇತೃತ್ವ ನೀಡಲಿದ್ದು, ಮೌಲನಾ ಪೆರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಈ ಸಂದರ್ಭ ಶೈಖುನಾ ಅಲಿಕುಂಞ ಉಸ್ತಾದ್, ಬೇಕಲ ಉಸ್ತಾದ್, ಮಾಣಿ ಉಸ್ತಾದ್, ಕಾವಳಕಟ್ಟೆ ಹಝ್ರತ್, ಮಹ್‌ಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಯು.ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಯೇನೆಪೋಯ ಅಬ್ದುಲ್ಲ ಕುಂಞ, ಅಬ್ದುಲ್ ರಶೀದ್ ಝೈನಿ, ಶಾಫಿ ಸಅದಿ ಬೆಂಗಳೂರು, ಭಾಗವಹಿಸಲಿದ್ದಾರೆ. ಸಿ.ಎಚ್ ಮಹಮ್ಮದಾಲಿ ಸಖಾಫಿ ಹಾಗೂ ಇಬ್ರಾಹಿಂ ಸಖಾಪಿ ಸೆರ್ಕಳ ನಾನಾ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಾರುಲ್ ಅಶ್ ಅರಿಯಃ ದ ಸದಸ್ಯರಾದ ಅಬ್ದುಲ್ ರಶೀದ್ ಹನೀಫಿ, ಅಬ್ದುಲ್ ವಾಜೀದ್ ಹನೀಫಿ, ಪ್ರಚಾರ ಸಮಿತಿಯ ಯು.ಎಸ್ ಉಸ್ಮಾನ್ ಹಾಜಿ, ಎಸ್‌ಎಂಯ ಉಮ್ಮರ್ ಬಾಕಿಮಾರ್, ಸಿದ್ದೀಕ್ ಕುಕ್ಕಾಜೆ ಉಪಸ್ಥಿತರಿದ್ದರು.

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...