Thursday, January 29, 2026

ಎರಡು ಕುಟುಂಬದ ಹತ್ತು ಮಂದಿಯ ಕೊಲೆ?

ಬಂಟ್ವಾಳ: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕುಟುಂಬಗಳ ಹತ್ತು ಮಂದಿ ಭೀಕರವಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಆರು ಮಂದಿಯನ್ನು ಇರಿದು ಕೊಲೆ ಮಾಡಲಾಗಿದೆ. ನಾಲ್ಕು ಮಂದಿ ಸಜೀವವಾಗಿ ದಹನವಾಗಿದ್ದು ಇದು ಕೊಲೆಯೋ, ಆಕಸ್ಮಿಕ ಘಟನೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶಾಖಪಟ್ಟಣ ಜಿಲ್ಲೆಯ ಜುತ್ತಾಡದಲ್ಲಿ ರಮಣ, ಉಷಾರಾಣಿ, ರಮಾದೇವಿ, ಅರುಣ, ಮಕ್ಕಳಾದ ಉದಯ, ಉರ್ವೀಷ ಎಂಬವರನ್ನು ಇರಿದು ಕೊಲೆ ಮಾಡಲಾಗಿದೆ. ಈ ಕುಟುಂಬದ ಅಪ್ಪಲರಾಜು ಎಂಬಾತ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ಈತ ಕೊಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮಿಥಿಲಾಪುರಿ ಉಡಾ ಕಾಲಾನಿಯಲ್ಲಿ ಒಂದೇ ಕುಟುಂಬದ ಬಂಗಾರುನಾಯ್ದು(೫೦), ಡಾ. ನಿರ್ಮಲಾ(೪೪), ದೀಪಕ್(೨೨), ಕಶ್ಯಪ್(೧೯) ಎಂಬವರು ಸಜೀವವಾಗಿ ದಹನಗೊಂಡಿದ್ದಾರೆ. ಮನೆಗೆ ಬೆಂಕಿ ಹಚ್ಚಿ ಇವರನ್ನು ಕೊಲೆ ಮಾಡಿರಬೇಕು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.

More from the blog

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...

ಕೊಳ್ನಾಡು: ಕಾಲುಜಾರಿ ಬಾವಿಗೆ ಬಿದ್ದು ಕೃಷಿಕ ಸಾವು

ವಿಟ್ಲ: ದಾರಿ ಬದಿಯ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಕೊಳ್ನಾಡು ಗ್ರಾಮದ ಸಾಲೆತ್ತೂರು ಕೋಡಿ ನಿವಾಸಿ ಕೃಷ್ಣಪ್ಪ ಪೂಜಾರಿ(70) ಮೃತ ಪಟ್ಟಿದ್ದಾರೆ. ಮಂಗಳವಾರ ಸಂಜೆ ಎಂದಿನಂತೆ ಸಾಲೆತ್ತೂರು ಪೇಟೆಗೆ ಹೋಗಿ ಹಿಂತಿರುಗಿ ಬರುವಾಗ...

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...