Monday, January 26, 2026

ಒಡ್ಡೂರು ಫಾರ್ಮ್ಸ್‌ನಲ್ಲಿ ಬಂಟ್ವಾಳ ಪ್ರಿಂಟರ್‍ಸ್ ಎಸೋಸಿಯೇಶನ್‌ನಿಂದ ವಿದ್ಯಾನಿಧಿ ವಿತರಣೆ

ಬಂಟ್ವಾಳ : ಮುದ್ರಣ ರಂಗದಲ್ಲಿ ಸಮಾನತೆ ಇರಬೇಕು. ಎಲ್ಲರೂ ಒಂದೇ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಮಾತ್ರ ಮಾಡಿದ ಸಂಘಟನೆಗೊಂದು ಅರ್ಥ ಇರುತ್ತದೆ ಎಂದು ಕರ್ನಾಟಕ ರಾಜ್ಯ ಅಸಂಘಟಿತ ಮುದ್ರಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎನ್. ರಾಜೇಂದ್ರ ಬಂಗೇರ ತಿಳಿಸಿದರು.
ಅವರು ಭಾನುವಾರ ಒಡ್ಡೂರು ಫಾರ್ಮ್ಸ್‌ನಲ್ಲಿ ನಡೆದ ಬಂಟ್ವಾಳ ತಾಲೂಕಿನ ಮುದ್ರಣ ಸಂಸ್ಥೆಯ ಮಾಲಕ ಹಾಗೂ ಕಾರ್ಮಿಕರಿಗೆ ನೀಡಿದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಹೆಚ್ಚಿನ ಭಾಗದಲ್ಲಿ ಮುದ್ರಣ ಕ್ಷೇತ್ರದ ಮಾಲಕರು ಇನ್ನೂ ಸಂಘಟಿತರಾಗಿಲ್ಲ. ಹೀಗಾಗಿ ಈ ಉದ್ಯಮದಲ್ಲಿ ಕೆಲಸ ಮಾಡುವವರು ತುಂಬಾ ಕಷ್ಟದ ಪರಿಸ್ಥಿಯಲ್ಲೇ ಬದುಕುವ ಸನ್ನಿವೇಶ ಎದುರಾಗಿದೆ. ಎಲ್ಲರೂ ಅಸೋಸಿಯೇಶನ್ ನಿರ್ಧರಿಸಿದ ಬೆಲೆಗೆ ಮುದ್ರಣ ಮಾಡಿಕೊಟ್ಟರೆ ಯಾರಿಗೂ ನಷ್ಟವಾಗುವುದಿಲ್ಲ ಎಂದರು.
ವಿದ್ಯಾನಿಧಿ ಬಿಡುಗಡೆ : ಮುದ್ರಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಬಂಟ್ವಾಳ ಪ್ರಿಂಟರ್‍ಸ್ ಎಸೋಸಿಯೇಶನ್‌ನ ವತಿಯಿಂದ ವಿದ್ಯಾರ್ಥಿಗಳ ವಿದ್ಯಾನಿಧಿಯೋಜನೆಯನ್ನು ಈ ವರ್ಷ ಸ್ಥಾಪಿಸಲಾಯಿತು. ಅದಕ್ಕೆ ಪೂರಕವಾದ ವಿಜ್ಞಾಪನಾ ಪತ್ರವನ್ನು ಸ್ಥಾಪಕಾದ್ಯಕ್ಷ ಲಿಯೋ ಬಾಸಿಲ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು. ನಂತರ ಅರ್ಹ ಆರು ವಿದ್ಯಾರ್ಥಿಗಳಾದ ಮೊಡಂಕಾಪು ಇನ್‌ಫೆಂಟ್ ಪ್ರಾಥಮಿಕ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಆದರ್ಶ್, ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಸಚಿನ್, ಮಾಣಿ ಬಾಲವಿಕಾಸ ಪ್ರೌಢ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಅಂಕಿತ್, ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಅಪೇಕ್ಷಾ, ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಹರ್ಷಿತಾ, ಕೊಯಿಲ ಸರಕಾರಿ ಪ್ರೌಢ ಶಾಲೆ ೭ನೇ ತರಗತಿ ವಿದ್ಯಾರ್ಥಿ ದೀಕ್ಷಿತಾರವರಿಗೆ ವಿದ್ಯಾರ್ಥಿವೇತನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಶನ್‌ನ ಅಧ್ಯಕ್ಷ ಈಶ್ವರ ಕುಮಾರ್ ಭಟ್ ಎಸ್. ವಹಿಸಿದ್ದರು. ಬೇಬಿ ವೈಷ್ಣವಿ ವೈ.ಕೆ. ಪ್ರಾರ್ಥನೆ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ರಘುವೀರ್ ಕಾರ್ತಿಕ್ ಸ್ವಾಗತಿಸಿದರು. ಗೌರವ ಸಲಹೆಗಾರ ರಾಮದಾಸ್ ಬಂಟ್ವಾಳ ಪ್ರಸ್ತಾವನೆಗೈದರು. ಯಾದವ ಕುಲಾಲ್ ಧನ್ಯವಾದ ಮಾಡಿದರು. ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನವೀನ್ ಕುಮಾರ್, ಉಪಾಧ್ಯಕ್ಷ ವಿದ್ಯಾದರ ಜೈನ್, ಅಸೋಸಿಯೇಶನ್‌ನ ಪದಾಧಿಕಾರಿಗಳಾದ ದಿನೇಶ್ ತುಂಬೆ, ನಾಗರಾಜ್ ಕಾರಿಂಜ, ವೆಂಕಟ್ರಮಣ ಕಲ್ಲಡ್ಕ, ಹರೀಶ್ ಕಲ್ಲಡ್ಕ, ಮಾಧವ ಬ್ರಹ್ಮರಕೂಟ್ಲು, ಮಂಜಪ್ಪ ಅರಳ, ತಿಮ್ಮಪ್ಪ ನರಿಕೊಂಬು, ಸಂಧ್ಯಾ ಸಿದ್ದಕಟ್ಟೆ, ಸುರೇಶ್ ಬೆಂಜನಪದವು, ಕೇಶವ ಬಂಟ್ವಾಳ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...