ಪುತ್ತೂರು: ಬಹುವಚನಂ ಆಶ್ರಯದಲ್ಲಿ ಆಯೋಜನೆಗೊಂಡ ವಿದುಷಿ ಶ್ರೀಮತಿ ಉಷಾ ರಾಮಕೃಷ್ಣ ಭಟ್ ರವರ ಶಾಸ್ತ್ರೀಯ ಸಂಗೀತ ಕಛೇರಿಯು


ದರ್ಬೆ ವಿದ್ಯಾನಗರದ ಪದ್ಮಿನಿ ಸಭಾಭವನದಲ್ಲಿ ಭಾನುವಾರ ಸಂಜೆ ನಡೆಯಿತು. ವಯಲಿನ್ ನಲ್ಲಿ ಕು.ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಬಾಲಕೃಷ್ಣ ಭಟ್ ಹೊಸಮನೆ ಸಹಕರಿಸಿದರು. ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ಬಹುವಚನಂ ನ ಡಾ.ಶ್ರೀಶ ಕುಮಾರ್ ಪ್ರಸ್ತಾವನೆಗೈದರು. ರಂಗಕರ್ಮಿ ಐಕೆ ಬೊಳುವಾರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.












