Thursday, February 13, 2025

ವೀರಕಂಭ ಗ್ರಾಮ ಪಂಚಾಯತಿನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

ಬಂಟ್ವಾಳ: ತಾಲೂಕು ವೀರಕಂಭ ಗ್ರಾಮ ಪಂಚಾಯತಿನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ, ವೀರಕಂಭ ಇಲ್ಲಿ ಗ್ರಾಮಾ ಪಂಚಾಯತ್ ಅಧ್ಯಕ್ಷರಾದ ಲಲಿತಾ ರವರ ಅಧ್ಯಕ್ಷ ತೆಯಲ್ಲಿ ನಡೆಯಿತು.

ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ ಭಾಗವಹಿಸಿ ಗ್ರಾಮ ಸಭೆಯನ್ನು ಯಶಸ್ವಿಯಾಗಿ ನಡೆಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫನತ್ಯಾಜ್ಯ ಫಟಕ ನಿರ್ಮಾಣ ವಾಗದ ಬಗ್ಗೆ ಹಾಗು ಫನತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡುವಂತೆ ಗ್ರಾಮಸ್ಥರು ಪ್ರಶ್ನಿಸಿದರು ಹಾಗೂ ಮಂಗಳಪದವು ಪ್ರದೇಶದಲ್ಲಿ ಅನಾಧಿಕೃತ ಕಟ್ಟಡ ತೆರವ್ ಗೊಳಿಸದಿರುದರ ಬಗ್ಗೆ, ವಿವಿಧ ಜಂಕ್ಷನ್ ಗಳಲ್ಲಿ ಅಳವಡಿಸಿದ ಸೋಲಾರ್ ದೀಪ ರಿಪೇರಿ ಮಾಡದಿರುವುದರ ಬಗ್ಗೆ ಪ್ರಶ್ನಿಸಿದರು.

ವಿವಿಧ ಇಲಾಖೆಗಳಾದ ಅರೋಗ್ಯಇಲಾಖೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ,ಕೃಷಿ ಇಲಾಖೆ, ಮೆಸ್ಕಾಂ ಇಲಾಖೆ,ತೋಟಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಉದ್ಯೋಗ ಖಾತರಿ ಇಲಾಖೆ,ಪೊಲೀಸ್ ಇಲಾಖೆ,ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಗ್ರಾ ಪಂ ಸದಸ್ಯರುಗಳಾದ ರಘು ಪೂಜಾರಿ,ದಿನೇಶ್ ಪೂಜಾರಿ, ನಿಶಾಂತ್ ರೈ, ಸಂದೀಪ್, ಜಯಪ್ರಸಾದ್, ಅಬ್ದುಲ್ ರಹಿಮಾನ್, ಜಯಂತಿ, ಮೀನಾಕ್ಷಿ, ಗೀತಾ ಜೆ ಗಾಂಭೀರ್, ಉಮಾವತಿ,ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರು, ಅರೋಗ್ಯ ಸುರಕ್ಷಾಣಾಧಿಕಾರಿಗಳು ,ಗ್ರಾಮ ಸಮುದಾಯ ಅರೋಗ್ಯ ಅಧಿಕಾರಿ,ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು,ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾ ಪಂ ಸಿಬ್ಬಂದಿ ಗಳು ಹಾಜರಿದ್ದರು. ಮಜಿ ಶಾಲಾ ಮಕ್ಕಳು ನಾಡಗೀತೆ ಹಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ಎಂ ಸ್ವಾಗತಿಸಿ, ಕಾರ್ಯದರ್ಶಿ ಸವಿತಾ ವಾರ್ಷಿಕ ವರದಿ ವಾಚಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...