ಬಂಟ್ವಾಳ: ವೀರಕಂಬ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ಇಲ್ಲಿನ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗಿನ ಮಕ್ಕಳಿಗೆ ರಜಾ ಅವಧಿಯ ಸಮಯದಲ್ಲಿ ಮಕ್ಕಳ ಬಿಸಿ ಊಟದ ಅಕ್ಷರ ದಾಸೋಹಕ್ಕೆ ಬಂದಂತಹ ಅಕ್ಕಿ ಮತ್ತು ಬೇಳೆಯನ್ನು ಮಕ್ಕಳ ಪೋಷಕರಿಗೆ ವಿತರಿಸಲಾಯಿತು.

ಪೋಷಕರು ಯಾವುದೇ ಗೊಂದಲವಿಲ್ಲದೆ ಮುಖಕ್ಕೆ ಮಾಸ್ಕ್ ಧರಿಸಿ ಸಾಮೂಹಿಕ ಅಂತರ ಕಾಯ್ದುಕೊಂಡು ಪಡೆದುಕೊಂಡರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ, ಶಿಕ್ಷಕಿ ಸಂಗೀತ ಶರ್ಮ ಹಾಗೂ ಅಡುಗೆ ಸಿಬ್ಬಂದಿಗಳು ವಿತರಣೆಯಲ್ಲಿ ಸಹಕರಿಸಿದರು.

