Monday, February 2, 2026

ವರಟೀಲ್ ಮೂಲರಪಟ್ನ ಕಾಂಕ್ರೀಟ್ ರಸ್ತೆಯನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಣೆ

ಬಂಟ್ವಾಳ: ಶಾಸಕರ  1.50 ಕೋಟಿ ವೆಚ್ಚದ ಅನುದಾನಲ್ಲಿ  ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡಗಬೆಳ್ಳೂರು ಗ್ರಾಮದ ವರಟಿಲ್ ಮುಲಾರಪಟ್ನ  ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು  ಪೊಳಲಿ ಮೂಡಬಿದ್ರೆ ಸಂಪರ್ಕದ ಈ ರಸ್ತೆಗೆ ಕಾಂಕ್ರೀಟಿಕರಣ ಮಾಡುವ ಬಗ್ಗೆ ಈ ಭಾಗದ ನಿವಾಸಿಗಳಿಂದ  ಬಹು ಬೇಡಿಕೆ ಇತ್ತು. ಇಲ್ಲಿನ ಜನರ ಬೇಡಿಕೆಗೆ  ಅನುಗುಣವಾಗಿ ಕಾಂಕ್ರೀಟ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಬೇಡಿಕೆಗೆ ಅನುಗುಣವಾಗಿ ಹಂತಹಂತವಾಗಿ ಕೆಲಸ ಮಾಡುವ ಭರವಸೆ ನೀಡಿದರು.
ತಾ.ಪಂ.ಸದಸ್ಯ ಯಶವಂತ ಪೊಳಲಿ,  ಬಂಟ್ವಾಳ  ಕ್ಷೇತ್ರ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಮೋರ್ಚಾದ ಕಾರ್ಯದರ್ಶಿ ನಂದರಾಮ ರೈ, ಅರಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ ಅಳ್ವ, ಪಂಚಾಯತ್ ಸದಸ್ಯ ರದಾ ಎಂ.ಬಿ.ಆಶ್ರಪ್, ಹಾಜಬ್ಬ, ಪ್ರಮುಖರಾದ ಪ್ರಕಾಶ್ ಆಳ್ವ, ರತ್ನಾಕರ ಕೋಟ್ಯಾನ್, ಹರಿಯಪ್ಪ ಮುತ್ತೂರು, ರಮಾನಾಥ ರಾಯಿ,  ಗಣೇಶ್ ರೈ, ರಂಜನ್ ಕುಮಾರ್, ಸುಂದರ ಶೆಟ್ಟಿ, ರಮೇಶ್ ಭಟ್ಟಾಜೆ, ಪುರುಷೋತ್ತಮ ಶೆಟ್ಟಿ ವಾಮದಪದವು,  ಎಂ.ಅಬ್ದುಲ್ ಹಮೀದ್ , ಮಸೀದಿ ಅಧ್ಯಕ್ಷ ಅಶ್ರಪ್, ಜಿ.ಎಚ್.ಎಮ್,   ಎಂ.ಎಸ್.ಶಾಲಿ, ಕಾರ್ಯದರ್ಶಿ ಸಜೀಯುದ್ದೀನ್,  ಪುತ್ತುಮೋನು ಮಾರ್ಗದಂಗಡಿ, ಎ.ಪಿ.ನಾಶೀರ್, ಎಂ.ಪಿ.ಲತೀಪ್, ಇಬ್ರಾಹಿಂ, ಜಬ್ಬಾರ್, ಗುತ್ತಿಗೆದಾರ ಶಾಫಿ ಪಟ್ನ, ಕೆ.ಆರ್. ಡಿ .ಎಲ್. ನ ಇಂಜಿನಿಯರ್ ರಕ್ಷಿತ್, ಮತ್ತಿತರರು ಉಪಸ್ಥಿತರಿದ್ದರು. ‌

More from the blog

ಕೇಂದ್ರ ಬಜೆಟ್ 2026-27: ಸರ್ವೋದಯದ ಸಕಾರಾತ್ಮಕ ಬಜೆಟ್..

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್‌ನ್ನು ಮಂಡಿಸಿದ್ದಾರೆ. ಈ ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. "ವಿಕಸಿತ ಭಾರತ" ದ ಮಹಾತ್ವಾಕಾಂಕ್ಷೆಯನ್ನು...

Vittla : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಹಲ್ಲೆ – ಆರೋಪಿಗಳು ವಶಕ್ಕೆ

ವಿಟ್ಲ : ವ್ಯಕ್ತಿಯೋರ್ವರು ಮಾರ್ನಮಿಗುಡ್ಡೆ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಮೂವರು ಅಪರಿಚಿತ ಮುಸುಕುಧಾರಿಗಳು ತಡೆದು ಹಲ್ಲೆ ನಡೆಸಿ, ಕೈಯಿಂದ ಮತ್ತು ಕಟ್ಟಿಗೆ ತುಂಡಿನಿಂದ ಹೊಡೆದು ಗಾಯಗೊಳಿಸಿ, ಅವರ ಬಳಿ ಇದ್ದ ಮೊಬೈಲ್...

Vittla : ನ್ಯಾಯವಾದಿಯ ಮನೆಗೆ ನುಗ್ಗಿ ಕಳ್ಳತನ..

ವಿಟ್ಲ: ನ್ಯಾಯವಾದಿಯೊಬ್ಬರ ಮನೆಗೆ ನುಗ್ಗಿ ಕಳ್ಳರು ಕಳ್ಳತನ ನಡೆಸಿದ ಘಟನೆ ವಿಟ್ಲದ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪ ನಡೆದಿದೆ. ಅಡ್ವಕೇಟ್ ಸಫಿಯಾ ನೌಫಲ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಮಂದಿ ಎಲ್ಲ ಒಂದು ತಿಂಗಳ...

Bantwal : ನೀರು ಕೇಳುವ ನೆಪದಲ್ಲಿ ವೃದ್ಧೆಯ ಕರಿಮಣಿ ಸರ ಎಗರಿಸಿದ ಕಳ್ಳ – ಪ್ರಕರಣ ದಾಖಲು

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವ ನೀರು ಕೇಳುವ ನೆಪದಲ್ಲಿ ವೃದ್ಧ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಕರಿಮಣಿ ಸರವನ್ನು ಎಳೆದೊಯ್ದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ವಗ್ಗದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಗ್ಗ ಸಮೀಪದ...