ಪುಣಚ: ಶ್ರೀ ದೇವಿ ಮಹಿಳಾ ಮಂಡಳಿ, ದೇವಿನಗರದ ವತಿಯಿಂದ 17ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಶ್ರೀ ಮಹಿಷಮರ್ದಿನಿ ಸಭಾ ಭವನದಲ್ಲಿ ನಡೆಯಿತು.
ಧಾರ್ಮಿಕ ಉಪಾನ್ಯಾಸ ನೀಡಿದ ಮೈತ್ರೇಯಿ ಗುರುಕುಲದ ಶಿಕ್ಷಕಿ ಶೃತಿ ವರಮಹಾಲಕ್ಷ್ಮೀ ದಿನದ ಮಹತ್ವವನ್ನು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವಹಿಸಿದ್ದರು. ಪುಣಚ ಗ್ರಾಮ ಪಂಚಾಯಿತಿ ಸದಸ್ಯೆ ಯಮುನಾ ಗೌಡ ಉಪಸ್ಥಿತರಿದ್ದರು.
ಕಾವೇರಿ ಪ್ರಾರ್ಥಿಸಿದರು. ವರಮಹಾಲಕ್ಷ್ಮೀ ಸಮಿತಿಯ ಅಧ್ಯಕ್ಷೆ ಕಮಲಾ.ಜಿ ಸ್ವಾಗತಿಸಿದರು. ಮಹಿಳಾ ಮಂಡಳಿ ಸಂಚಾಲಕಿ ಗಂಗಮ್ಮ ವಂದಿಸಿದರು. ರಜನಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನವದಂಪತಿಗಳಿಗೆ ಆರತಿ ಬೆಳಗಲಾಯಿತು.
