ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆ, ಬಂಟ್ವಾಳ ವಲಯ ಮತ್ತು ಮಂಚಿ ಸಾವಿರದ ಅರಸು ಕುರಿಯಾಡಿತ್ತಾಯ ಸೇವಾ ಸಮಿತಿ ಇದರ ವತಿಯಿಂದ ಸಾವಿರದ ಅರಸು ಕುರಿಯಾಡಿತ್ತಾಯ ದೈವಸ್ಥಾನದಲ್ಲಿ ಜು.17ರಂದು ಹಸಿರು ಕರ್ನಾಟಕ ಯೋಜನೆಯಡಿಯಲ್ಲಿ ವನಮಹೋತ್ಸವ ನಡೆಯಿತು. ದೈವಸ್ಥಾನದ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಬಂಟ್ವಾಳ ಅರಣ್ಯ ವಲಯದ ಅರಣ್ಯ ರಕ್ಷಕ ದಯಾನಂದ , ಸೇವಾ ಸಮಿತಿ ಅಧ್ಯಕ್ಷರಾದ ವಿಠಲ ರೈ, ಬಾಲಾಜಿ ಬೈಲು, ಕಾರ್ಯದರ್ಶಿ ರಮೇಶ್ ರಾವ್ ಪತ್ತುಮುಡಿ, ರವಿ ಮಂಚಿಗುತ್ತು,ಉಮಾನಾಥ ರೈ ಮೇರಾವು, ಸುರೇಶ ಪೂಜಾರಿ, ಶ್ರೀಕಾಂತ್ ಪತ್ತುಮುಡಿ, ರಾಜೇಶ್ ಆಳ್ವ ಬಾಳಿಕೆ, ಜಯರಾಮ್ ರೈ ಭಟ್ರಬೈಲು, ವಿಶ್ವನಾಥ ಸಪಲ್ಯ, ನಾರಾಯಣ ಕೇಪುಳಗುರಿ, ಚಂದ್ರಹಾಸ , ಸತೀಶ್ ನಾವಡ ಮೊದಲಾದವರು ಉಪಸ್ಥಿತರಿದ್ದರು.
