ಬಂಟ್ವಾಳ: ತಾಂತ್ರಿಕ ಜೀವನದ ಮಧ್ಯೆ ಗಿಡಮರಗಳ ನೆನಪು ಮರೆತುಬಿಟ್ಟಿದೆ, ಹೂಗಿಡಗಳ ಪ್ರೀತಿ ಯ ಬದಲು ಮೊಬೈಲ್ ನ ಮೇಲೆ ಪ್ರೀತಿ ಹೆಚ್ಚಾಗಿದೆ ಇದು ದುರಂತ ಎಂದು ಬಂಟ್ವಾಳ ಕಾಮಾಜೆ ಪ್ರಥಮ ದರ್ಜೆ ಕಾಲೇಜಿನ ಕಾರ್ಯಧ್ಯಕ್ಷ ಯುವ ವಕೀಲ ಪ್ರಸಾದ್ ಕುಮಾರ್ ಹೇಳಿದರು.
ಅರಣ್ಯ ಇಲಾಖೆ , ದ.ಕ.ಜಿಲ್ಲಾ ಪಂಚಾಯತ್ , ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಹಾಗೂ ಸಾಮಾಜಿಕ ಅರಣ್ಯ ವಲಯ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ನಡೆದ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಈ ದೇಶ ಉಳಿಯಬೇಕಾದರೆ ವನ್ಯ ಸಂಪತ್ತು ಉಳಿಯಬೇಕಾಗಿದೆ, ವನ ಸಂಪತ್ತು ಉಳಿಯಬೇಕಾದರೆ ವೈಜ್ಞಾನಿಕ ರೀತಿಯಲ್ಲಿ ಇದರ ಅಧ್ಯಯನ ಮಾಡಬೇಕಾಗಿದೆ.
ಅರಣ್ಯ ರಕ್ಷಣೆ ನಮ್ಮ ಹೊಣೆಯಾಗಬೇಕು, ಅದು ವಿದ್ಯಾರ್ಥಿ ದೆಸೆಯಿಂದ ಆರಂಭವಾಗಬೇಕು ಎಂದು ಅವರು ಹೇಳಿದರು.
ವನಮಹೋತ್ಸವ ಕಾರ್ಯಕ್ರಮ ಮಾಡುವುದು ಮುಖ್ಯವಲ್ಲ, ನೆಟ್ಟ ಗಿಡಗಳ ರಕ್ಷಣೆ ಮಾಡಬೇಕಾದ ಮಹತ್ತರ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಮಾಜೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಗಿರೀಶ್ ಭಟ್
ಮನುಷ್ಯನ ಭವಿಷ್ಯ ಕ್ಕಾಗಿ ಅರಣ್ಯ ರಕ್ಷಣೆ ಮಾಡಬೇಕಾಗಿದೆ. ಮನುಷ್ಯ ಪರಿಸರದ ಹತೋಟಿಯನ್ನು ಸಾಧಿಸುವುದನ್ನು ಬಿಟ್ಟು,
ಅರಣ್ಯ ರಕ್ಷಣೆ ಗಾಗಿ ಕೆಲವೊಂದು ಅಮೂಲ್ಯವಾದ ಬದಲಾವಣೆ ಆಗಲೇಬೇಕಾಗಿದೆ. ಪಂಚಭೂತಗಳಲ್ಲೂ ಭವಿಷ್ಯದಲ್ಲಿ ವೈಪರೀತ್ಯ ಕಂಡುಬರುತ್ತದೆ ಎಂಬುದು ಎನಿಸಲಿಲ್ಲ.
ತಂತ್ರಜ್ಞಾನದಲ್ಲಿ ಸದೃಡವಾಗುತ್ತಲೆ ಪರಿಸರವನ್ನು ನಾಶಮಾಡುತ್ತಾ ಹೋಗುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.
ಬಂಟ್ವಾಳ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಸುರೇಶ್ ಬಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪುರಸಭಾ ಸದಸ್ಯೆ ಶೋಭಾಹರಿಶ್ಚಂದ್ರ, ಐ.ಕ್ಯೂ, ಎ.ಸಿ.ಸಂಚಾಲಕ ಪ್ರೋಫೆಸರ್ ಸತೀಶ್ ಶೆಟ್ಟಿ, ಸಾಮಾಜಿಕ ಅರಣ್ಯ ಉಪವಲಯ ಅರಣ್ಯಾಧಿಕಾರಿ ರಂಜಿತ ಎ. ಉಪಸ್ಥಿತರಿದ್ದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಾಮಾಜಿಕ ಅರಣ್ಯ ವಲಯಾಧಿಕಾರಿ ರಾಜೇಶ್ ಬಳಿಗಾರ್ ಅತಿವೃಷ್ಟಿ ಮತ್ತು ಅನಾವೃಷ್ಟಿ ಯಾಗಲು ಕಾರಣ ಅರಣ್ಯವನ್ನು ಪೋಷಣೆ ಮಾಡದೆ ಇರುವುದು.
ಇಲಾಖೆಯ ಜೊತೆ ಸಾರ್ವಜನಿಕರು ಕೈಜೋಡಿಸಿ ದಾಗ ಮಾತ್ರ ಸರಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದು ಅವರು ತಿಳಿಸಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಸ್ವಾಗತಿಸಿದರು. ಉಪವಲಯ ಅರಣ್ಯಾಧಿಕಾರಿ ರಂಜಿತ ಎ. ವಂದಿಸಿದರು.
ವಿದ್ಯಾರ್ಥಿ ನಿ ಲಿಖಿತ ಕಾರ್ಯಕ್ರಮ ನಿರೂಪಿಸಿದರು.