Thursday, February 13, 2025

ಟೀಮ್ ವೀರಾಂಜನೇಯ ಫರಂಗಿಪೇಟೆ ತಂಡದ ಸಾರಥ್ಯದಲ್ಲಿ   ವೃಕ್ಷಾರೋಪಣ

ಬಂಟ್ವಾಳ: ಟೀಮ್ ವೀರಾಂಜನೇಯ ಫರಂಗಿಪೇಟೆ ತಂಡದ ಆಶ್ರಯದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಹತ್ತಿರ ತುಪ್ಪೆಕಲ್ಲು  ವಠಾರದಲ್ಲಿವನಮಹೋತ್ಸವ ಕಾರ್ಯಕ್ರಮ ವೃಕ್ಷಾರೋಪಣ –ವೃಕ್ಷ ವೃದ್ಧಿಯಿಂದ ಮನುಕುಲಕ್ಕೆ ಸಮೃದ್ಧಿ ಎಂಬ ಶೀರ್ಷಿಕೆಯೊಂದಿಗೆ ಸಹಸ್ರಾರು ನಾಗರಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಪರಿಸರ ಸಂವರ್ಧನೆ ಅಭಿನಂದನೆಯ ಅರ್ಕುಳ ಬೀಡು ವಜ್ರನಾಭ ಶೆಟ್ಟಿ: ಏರುತ್ತಿರುವ ತಾಪಮಾನ  ಮಳೆಯ ಕಣ್ಣು ಮುಚ್ಚಾಲಿಯಾಟ ವಿಶ ಸಾಗುತ್ತಿರುವ ಗಾಳಿ ಎಲ್ಲಾವು ಮಾನವ ನಿರ್ಮಿತ ಸಮಸ್ಯೆಗಳಾಗಿವೆ.ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವುದು ಮತ್ತು ಆಸಕ್ತರಿಗಿ ಗಿಡ ವಿತರಣೆಅಭಿನಂದನೀಯ  ಕಾರ್ಯಕ್ರಮ ಎಂದು ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಶ್ಲಾಘಿಸಿದರು.

ಅರ್ಕುಳ ಬೀಡು ಧರ್ಮದರ್ಶಿಗಳಾದಂತಹ ವಜ್ರನಾಭ ಶೆಟ್ಟಿ ಅವರು ಬಿಲ್ಲು ಪತ್ರ ಗಿಡವನ್ನು   ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.   ಕಾರ್ಯಕ್ರಮದಲ್ಲಿ ಅರ್ಕುಳ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ರತ್ನರಾಜ್ಶೆಟ್ಟಿ,ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ|| ಜಯಕುಮಾರ್ ಶೆಟ್ಟಿ SDMC ಉಜಿರೆ, ಕಂಪ ಸದಾನಂದ ಅಲ್ವಾ,ಪರಿಸರ ಪ್ರೇಮಿ ಮಾಧವ ಉಲ್ಲಾಲ್, ಕೃಷಿಕ ಅಜಿತ್ ಕುಮಾರ್ ಶೆಟ್ಟಿ ,ಗ್ರಾಮ ಪಂಚಾಯತ್ ಸದಸ್ಯಸಂತೋಷ್ ಕುಮಾರ್ ತುಪ್ಪೆಕಲ್ಲು, ಸೇಸಪ್ಪ ಕರ್ಕೇರ ಧರ್ಮಗಿರಿ, ದಿನಕರ ಕರ್ಕೇರ ಮಂಟಮೆ ,ಕೃಷಿಕ ಉಮೇಶ್ ಸೇಮಿತ ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಮತ್ತು ಅರ್ಕುಳ ,ತುಪ್ಪೆಕಲ್ಲು ಮತ್ತು ಪರಂಗಿಪೇಟೆಯಸಮಸ್ತ ನಾಗರಿಕರು ನೆರೆದಿದ್ದರು.ಅರ್ಕುಳ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು ಸಹಕರಿಸಿದರು, ಈ ಕಾರ್ಯಕ್ರಮದಲ್ಲಿ ಪಾಲು ಪಡೆದಂತಹ ಆರ್ಕುಳ, ತುಪ್ಪೆಕಲ್ಲು ಹಾಗೂ ಫರಂಗಿಪೇಟೆ ಪರಿಸರದ ನಾಗರಿಕರಿಗೆ ಸಸಿಗಳನ್ನು ವಿತರಿಸಿ ನಂತರ ಬಿಲ್ಲು ಪತ್ರ, ನೇರಳೆ,ಸಂಪಿಗೆ ,ಮಾವು, ಹಲಸು ಹಾಗು ಗಂಧದಸಸಿಗಳನ್ನು ದೈವಸ್ಥಾನದ ವಠಾರದಲ್ಲಿ ಗಣ್ಯರ ಸಮ್ಮುಖದಲ್ಲಿ ನೆಡಲಾಯಿತು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...