ಬಂಟ್ವಾಳ: ಪಾಣೆಮಂಗಳೂರಿಗೆ ಸಮೀಪದ ನರಹರಿ ಪರ್ವತದಲ್ಲಿ ರೋಟರಿ ಕ್ಲಬ್ ಬಂಟ್ವಾಳ. ಶ್ರೀನರಹರಿ ಪರ್ವತ ಸದಾಶಿವ ದೇವಾಲಯ ಮತ್ತು ಅರಣ್ಯಇಲಾಖೆ ಬಂಟ್ವಾಳ ವಲಯದ ಆಶ್ರಯದಲ್ಲಿ ವನಮಹೋತ್ಸವ ನಡೆಯಿತು. ನರಹರಿಪರ್ವತದ ಜೀಣೋರ್ಧಾರ ಸಮಿತಿಯ ಗೌರವಾಧ್ಯಕ್ಷ, ಮಾಜಿಸಚಿವ ಬಿ. ರಮಾನಾಥ ರೈ ಅವರು ಪರ್ವತದ ಪರಿಸರದಲ್ಲಿ ಗಿಡನೆಟ್ಟು ಶುಭ ಹಾರೈಸಿದರು.
ಬಳಿಕ ನಡೆದ ಸಭಾರಂಭದ ಅಧ್ಯಕ್ಷತೆಯನ್ನು ರೋಟರಿಕ್ಲಬ್ ಅಧ್ಯಕ್ಷೆ ಶಿವಾನಿ ಆರ್ ಬಳಗ ವಹಿಸಿದ್ದರು. ಮಾಜಿ ಶಾಸಕ ಎ ರುಕ್ಮಯ ಪೂಜಾರಿ ಮಾತನಾಡಿ ಅರಣ್ಯ ಸಂಪತ್ತನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆವರದಾನವಾಗುವಂತೆ ಮಾಡುವುದು ನಮ್ಮೆಲ್ಲರಕರ್ತವ್ಯವೆಂದು ಹೇಳಿದರು. ಬಂಟ್ವಾಳ ಉಪವಲಯ ಅರಣ್ಯಧಿಕಾರಿ ಯಶೋಧರ್ , ಕ್ಷೇತ್ರದ ಆಡಳಿತಮೋಕ್ತೆಸರಾದ ಡಾ| ಪ್ರಶಾಂತ್ ಮಾರ್ಲ , ಕ್ಷೇತ್ರದಜೀಣೋದ್ಧಾರ ಸಮಿತಿಯ ಡಾ.ಆತ್ಮರಂಜನ್ ರೈ , ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಶಂಕರ್ ಆಚಾರ್ಯಕಾರ್ಯಕ್ರಮ ನಿರೂಪಿಸಿದರು.