ಬಂಟ್ವಾಳ: ವಾಮದಪದವು ಯೋಗ ತರಬೇತಿ ಕೇಂದ್ರದ ವತಿಯಿಂದ ವಾಮದಪದವು ಶ್ರೀ ಗಣೇಶ ಮಂಟಪದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ನಿವೃತ್ತ ಬ್ಯಾಂಕ್ ಅಕಾರಿ ಜಿ.ಕೆ. ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಡಾ| ರಾಮಕೃಷ್ಣ ಎಸ್. ಅವರು ಮುಖ್ಯ ಅತಿಥಿಯಾಗಿದ್ದರು. ಯೋಗ ಗುರು ಗಣೇಶ ಪ್ರಭು ಅವರ ನೇತೃತ್ವದಲ್ಲಿ ಯೋಗಾಸನ ನಡೆಯಿತು. ತರಬೇತಿ ಕೇಂದ್ರದ ಸದಾನಂದ ಶೆಟ್ಟಿ, ಅನಂತ ಪೈ, ಜಯಾನಂದ ಚೌಟ, ಹರಿಪ್ರಸಾದ್, ಹರೀಶ ಗಟ್ಟಿ, ಸುರೇಶ್ ಕುಲಾಲ್, ಯಜ್ಞನಾರಾಯಣ ಹೊಳ್ಳ, ರವಿ ರಾಯಿ, ಸುಧೀರ್ ಶೆಟ್ಟಿ ಕುಂಡೋಳಿ, ಲೋಕೇಶ, ಶೇಖರ ಶೆಟ್ಟಿ, ಸಂತೋಷ್ ಜೈನ್, ಪ್ರಕಾಶ್ ಶೆಟ್ಟಿ, ಸತೀಶ್ ಬಂಗೇರ ಮತ್ತಿತರರು ಭಾಗವಹಿಸಿದ್ದರು.
