Thursday, July 10, 2025

ವಾಮದಪದವು: ರಾಮ್ ಸೇನಾ ಛತ್ರಪತಿ ಘಟಕ ಉದ್ಘಾಟನೆ

ಬಂಟ್ವಾಳ:  ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ವಾಮದಪದವಿನ ನೂತನ ರಾಮ್ ಸೇನಾ ಛತ್ರಪತಿ  ಘಟಕವು ಮೇ 25ರಂದು ವಾಮದಪದವಿನ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ರಾಮ್ ಸೇನಾ ಸಂಸ್ಥಾಪಕರಾದ  ಪ್ರಸಾದ್ ಅತ್ತಾವರ್, ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕುಂದರ್, ದ.ಕ ಜಿಲ್ಲಾಧ್ಯಕ್ಷರು ಕಿರಣ್ ವಿ.ಅಮೀನ್, ಜಿಲ್ಲಾ ಉಪಾಧ್ಯಕ್ಷರಾಗಿರುವ ಹರ್ಷಿತ್ ಪೂಜಾರಿ ಅಡ್ಯಾರ್ ಪದವು ಉಪಸ್ಥಿತರಿದ್ದರು.

ನೂತನ ಘಟಕದ ಗೌರವ ಅಧ್ಯಕ್ಷರಾಗಿ  ಜಯರಾಮ್ ಶೆಟ್ಟಿ ಕಾಪು, ಗೌರವ ಸಲಹೆಗಾರರಾಗಿ ಕಮಲ್ ಶೆಟ್ಟಿ ಬೊಳ್ಳಾಜೆ, ಘಟಕ ಅಧ್ಯಕ್ಷರು ಪದ್ಮನಾಭ ಭಂಡಾರಿ, ಉಪಾಧ್ಯಕ್ಷರು ರೂಪೇಶ್ ಪೂಜಾರಿ,  ಪ್ರಧಾನ ಕಾರ್ಯದರ್ಶಿ ರಜನೀಶ್ ಬಂಟ್ವಾಳ, ಸಂಘಟನಾ ಕಾರ್ಯದರ್ಶಿ ಲಿಖಿತ್ ಶೆಟ್ಟಿ ಕುಂಡೋಳಿಗುತ್ತು, ಕಾರ್ಯದರ್ಶಿ ಅನಿಲ್ ಶೆಟ್ಟಿ ಹರ್ಕಾಡಿ, ಸಹ ಸಂಘಟನಾ ಕಾರ್ಯದರ್ಶಿ ಶುಭಕರ ಶೆಟ್ಟಿ, ಗೋರಕ್ಷಕ ಸೇನಾ ಸಂಚಾಲಕ ನಿಶಾಂತ್ ಶೆಟ್ಟಿ ಬಾರಕ್ಕಿನೆಡೆ, ಸಹಾ ಸಂಚಾಲಕ ಧರ್ಮರಾಜ್ ಶೆಟ್ಟಿ ಬುಡಂಗಬೆಟ್ಟು ಅವರು ಆಯ್ಕೆಯಾಗಿದ್ದಾರೆ.

ಸಾಮಾಜಿಕ ಜಾಲತಾಣದ ಯಶೋದರ್ ಜೈನ್ ಹಾಗೂ ನಾಗರಾಜ್ ಶೆಟ್ಟಿ ಕುಂಜದೊಟ್ಟು ಕಾರ್ಯಕ್ರಮ ನಿರೂಪಿಸಿದರು

More from the blog

B. C Road : ಹೃದಯಾಘಾತದಿಂದ ಅವಿವಾಹಿತ ಯುವಕ ಸಾವು..

ಬಂಟ್ವಾಳ: ಹೃದಯಾಘಾತದಿಂದ ಸಾವನ್ನಪ್ಪುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದ್ದು, ಒಂದಷ್ಟು ಸುದ್ದಿಯಾಗುತ್ತಿರುವಾಗಲೇ ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ರಾಜಸ್ಥಾನ ಮೂಲದ ನಟವರ್ ಸಿಂಗ್ (27) ಮೃತಪಟ್ಟ ಯುವಕ. ಬಿಸಿರೋಡಿನ ಹೃದಯಭಾಗದಲ್ಲಿ...

Guru Purnima : ಭಾರತೀಯ ಜನತಾ ಪಾರ್ಟಿ ವತಿಯಿಂದ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಜುಲೈ 10 ಗುರುವಾರ ಗುರುಪೂರ್ಣಿಮೆಯಂದು, ಭಾರತೀಯ ಜನತಾ ಪಾರ್ಟಿ ವತಿಯಿಂದ 117ನೇ ಬೂತ್ ನಲ್ಲಿ ಗುರುಗಳನ್ನು ಗುರುತಿಸಿ ಅವರ ಮನೆಗೆ ಹೋಗಿ ಗೌರವಿಸುವ ಗುರುವಂದನಾ ಕಾರ್ಯಕ್ರಮ ನಡೆಯಿತು. ಎಲಬೆ ಪೂವಪ್ಪ ಪೂಜಾರಿಯವರ...

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮುಂದಿನ ಅಧಿವೇಶನದಲ್ಲೇ ಮಸೂದೆ : ಗೃಹ ಸಚಿವ ಜಿ. ಪರಮೇಶ್ವರ್..

ಮಂಗಳೂರು : ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಹಿನ್ನಲೆಯಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಮಸೂದೆ...

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ – ದಿನೇಶ್ ಗುಂಡೂರಾವ್.. 

ಮಂಗಳೂರು : ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದುಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅವರು...