ಬಂಟ್ವಾಳ ಮಾ. ೩೦: ಇತಿಹಾಸ ಪ್ರಸಿದ್ದ ಬಂಟ್ವಾಳ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ಶ್ರೀ ವೈದ್ಯನಾಥ ದೈವದ ಪಾಪೆಬಂಡಿ ಮೆರವಣಿಗೆಗೆ ಮಾ. ೩೦ರಂದು ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದಲ್ಲಿ ಗೌರವ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಚಾಲನೆ ನೀಡಿದರು. ಆಡಳಿತ ಸಮಿತಿ ಅಧ್ಯಕ್ಷ ಗಣೇಶ ಸುವರ್ಣ ತುಂಬೆ ಉಪಸ್ಥಿತರಿದ್ದರು.

ಚೆಂಡೆ, ವಾದ್ಯ, ಚಿಲಿಪಿಲಿ ಗೊಂಬೆ ಬಳಗ, ನಾಡಿನ ಪ್ರಸಿದ್ದ ೨೦ಕ್ಕೂ ಅಽಕ ಭಜನಾ ತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ಮೆರವಣಿಗೆಯು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮೂಲಕ ಬೈಪಾಸ್ ರಸ್ತೆಯಾಗಿ ಬಂಟ್ವಾಳ ಜಂಕ್ಷನ್‌ನಲ್ಲಿ ಪೇಟೆಯ ರಸ್ತೆಯಾಗಿ ದೈವಸ್ಥಾನಕ್ಕೆ ತಲುಪಿತು.
ಎ.1ರಂದು ಪಾಪೆಬಂಡಿಯನ್ನು ದೈವಕ್ಕೆ ಸಮರ್ಪಿಸುವ ಕಾರ್ಯಕ್ರಮ ನಡೆಯಲಿದೆ.
ಮೆರವಣಿಗೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು , ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ಪದ್ಮಶೇಖರ ಜೈನ್, ಬೇಬಿ ಕುಂದರ್, ಭುವನೇಶ್ ಪಚ್ಚಿನಡ್ಕ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದೇವಕಿ ಶಿವಪ್ಪ ಪೂಜಾರಿ, ಉದಯ ಕುಮಾರ್, ಸುರೇಶ್ ಕುಲಾಲ್, ಜಯರಾಮ ಸಾಮಾನಿ, ಮೋನಪ್ಪ ಮಜಿ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಜಗನ್ನಾಥ ತುಂಬೆ, ಮಹಾಬಲ ಬಂಗೇರ, ವೆಂಕಪ್ಪ ಪೂಜಾರಿ, ಶಿವಪ್ರಸಾದ್, ಗೋಪಾಲ ಸುವರ್ಣ ಸಹಿತ ಪ್ರಮುಖರು ಉಪಸ್ಥಿತರಿದ್ದರು.