ಬೆಂಗಳೂರು: ಪಾದರಾಯನಪುರ ಗಲಾಟೆ ವಿಚಾರ ರಾಜ್ಯಪಾಲ ವಿ.ಆರ್ ವಾಲಾ ಸಿಟ್ಟಿಗೆದ್ದಿದ್ದಾರೆ. ನಿನ್ನೆ ಗಲಾಟೆ ಬಗ್ಗೆ ಸರ್ಕಾರದಿ ವರದಿ ಕೇಳಿದ ಗವರ್ನರ್ ಇಂತಹ ಸಂದರ್ಭದಲ್ಲಿ ಗಲಾಟೆ ಏಕೆ ಆಯಿತು, ಕೊರೊನಾ ವೈರಸ್ ತಡೆಗಟ್ಟೋ ಸಮಯದಲ್ಲಿ ಸೀಲ್‌ಡೌನ್ ಆಗಿರುವ ಪ್ರದೇಶದಲ್ಲಿ ಜನರು ಹೇಗೆ ಬೀದಿಗೆ ಬಂದ್ರು.. ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂಬ ಬಗ್ಗೆ ವರದಿ ಪಡೆದರು.


ತಪ್ಪಿತಸ್ಥರ ಮೇಲೆ ಯಾವ ಕ್ರಮವಾಗಿದೆ, ಸದ್ಯದ ಪರಿಸ್ಥಿತಿ ಏನಿದೆ, ಮುಂಜಾಗ್ರತಾ ಕ್ರಮವೇನು ಏನ್ ತೆಗೆದುಕೊಂಡಿದ್ದೀರಿ, ಬೆಂಗಳೂರಿನ ಹಾಟ್‌ಸ್ಪಾಟ್ ಪ್ರದೇಶಗಳ ಭದ್ರತೆ ಯಾವ ಮಟ್ಟಕ್ಕಿದೆ ಎಂಬುದರ ಸಂಪೂರ್ಣ ವರದಿ ಕೇಳಿದ ಗವರ್ನರ್.












