ಮುಂಬಯಿ (ಪುತ್ತೂರು): ಪೂವರಿ ಕೂಟ ಹಾಗೂ ಯಶಸ್ ಪ್ರಕಾಶನ (ರಿ.) ಹೆಬ್ಬಾರಬೈಲು ಪುತ್ತೂರು ಇವರ ನೇತೃತ್ವದಲ್ಲಿ ಪ್ರಸ್ದಿದ್ಧ ತುಳು-ಕನ್ನಡ ಕಥೆಗಾರ್ತಿ ಶಶಿಕಲಾ ವರ್ಕಾಡಿ ರಚಿತ ತುಳು ಕಥಾ ಸಂಕಲನ ‘ಉರಲ್’ ಗ್ರಂಥ ಬಿಡುಗಡೆ ಕಾರ್ಯಕ್ರಮವು ಇದೇ ಭಾನುವಾರ (ಡಿ.30) ಬೆಳಗ್ಗೆ ನೆಹರೂ ನಗರ, ಸುದಾನ ವಸತಿಯುತ ಶಾಲೆಯ ಆವರಣದ ಎಡ್ವರ್ಡ್ ಮೆಮೋರಿಯಲ್ ಹಾಲ್‌ನಲ್ಲಿ ನಡಯಲಿದೆ ಎಂದು ಪೂವರಿ ಕೂಟ ಪುತ್ತೂರು ಇದರ ಪ್ರಧಾನ ಸಂಚಾಲಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕ ರೆ| ವಿಜಯ ಹಾರ್ವಿನ್ ಅಧ್ಯಕ್ಷತೆ ಹಾಗೂ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ಹವ್ಯಾಸಿ ಯಕ್ಷಗಾನ ಕಲಾವಿದ, ಸಿವಿಲ್ ಇಂಜಿನಿಯರ್ ಎ. ಜಿ ಜಗನ್ನೀ ವಾಸರಾವ್ ಅವರ ಗೌರವ ಉಪಸ್ಥಿಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ವಾಮನ ನಂದಾವರ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಪುತ್ತೂರು ತುಳು ಕೂಟದ ಮಾಜಿ ಅಧ್ಯಕ್ಷ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಗ್ರಂಥ ಪರಿಚಯ ಮಾಡಲಿದ್ದಾರೆ. ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.