Monday, January 26, 2026

ಉಲಾಯಿ – ಪಿದಾಯಿ ಆಟ ಆಡುತ್ತಿದ್ದ ಅಡ್ಡೆಗೆ ಜಿಲ್ಲಾ ಪೋಲೀಸ್ ತಂಡದಿಂದ ದಾಳಿ. ಲಕ್ಷಾಂತರ ರೂ ಮೌಲ್ಯದ ಸೊತ್ತುಗಳು ಹಾಗೂ 12 ಮಂದಿ ವಶಕ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಮನೆಯೊಂದರಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಉಲಾಯಿ ಪಿದಾಯಿ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರ ದಲ್ಲಿ ದಾಳಿ ನಡೆಸಿದ ದಕ್ಷಿಣ ಕನ್ನಡ ಮಹಿಳಾ ಪೊಲೀಸ್‌ ಠಾಣೆ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್‌ ಅವರು ಆಟದಲ್ಲಿ ನಿರತರಾಗಿದ್ದ 12 ಮಂದಿಯನ್ನು ಬಂಧಿಸಿ ಆಟಕ್ಕೆ ಬಳಸಿದ ಸೊತ್ತುಗಳ ಸಹಿತ ಸಾವಿರಾರು ರೂ ನಗದು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಆಟದಲ್ಲಿ ನಿರತರಾಗಿದ್ದ

1] ಕೃಷ್ಣ ಪೂಜಾರಿ 2] ರೋಹಿತಾಶ್ವ 3] ಗೋಪಾಲ 4] ಸತೀಶ ಮೂಲ್ಯ 5] ವಿಜಯ ಫೆರ್ನಾಂಡಿಸ್‌ 6] ವಿಶ್ವಾಸ್‌ ಭಂಡಾರಿ 7] ಗಂಗಾಧರ ಪೂಜಾರಿ 8] ಕೃಷ್ಣಪ್ಪ 9] ಶಿವಪ್ರಸಾದ್‌ 10] ಮೊಹಮ್ಮದ್‌ ಶರೀಫ್‌ 11] ಮೊಹಮ್ಮದ್‌ ಅಶ್ರಫ್‌ 12] ರಿಯಾಝ್‌

ಅವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.

ಬಂದಿತರಿಂದ  45,000/-, ನಗದು ಹಾಗೂ 12 ಮೊಬೈಲ್‌ ಫೋನ್‌ ಗಳು ಅಂದಾಜು 40,000/, 4 ಬೈಕ್‌ ಗಳು ಅಂದಾಜು ಮೌಲ್ಯ 1,20,000/-, 1 ಓಮ್ನಿ ವಾಹನ ಅಂದಾಜು ಮೌಲ್ಯ 50,000/-, 1 ಆಟೋರಿಕ್ಷಾ ಅಂದಾಜು ಮೌಲ್ಯ 40,000/- ವಶಕ್ಕೆ ಪಡೆದಿದ್ದಾರೆ.

ನಾವೂರ ಗ್ರಾಮದ ಬಡಗುಂಡಿ‌ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಉಲಾಯಿ ಪಿದಾಯಿ ಆಡುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪೋಲೀಸ್ ಮಾಹಿತಿ ಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದಾಗ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಉಲಾಯಿ ಪಿದಾಯಿ ಆಡುತ್ತಿದ್ದು ಕಂಡು ಬಂದಿದ್ದು ಸ್ಥಳದಲ್ಲಿದ್ದ 12 ಜನರನ್ನು ವಶಕ್ಕೆ ಪಡೆದಿದ್ದು ಅವರುಗಳು ರವರಾಗಿದ್ದು ಉಲಾಯಿ ಪಿದಾಯಿ ಆಡುವುದಕ್ಕೆ ಬಳಸಿದ ನಗದು ಹಾಗೂ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡು ಗ್ರಾಮಾಂತರ ಠಾಣಾ ಅ.ಕ್ರ 83/2021 ಕಲಂ 78, 80 ಕರ್ನಾಟಕ ಪೊಲೀಸ್‌ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿರುತ್ತದೆ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...