ಉಜಿರೆ: ಧರ್ಮಸ್ಥಳದಲ್ಲಿ ಇದೇ 9 ರಿಂದ 18ರ ವರೆಗೆ ನಡಯಲಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಸೋಮವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿಚತುರ್ವಂಶತಿ (24) ತೀರ್ಥಂಕರರ ಆರಾಧನೆ ನಡೆಯಿತು.
ಪೂಜ್ಯಆಚಾರ್ಯ ಶ್ರೀ 108 ವರ್ಧಮಾನ ಸಾಗರ್ಜಿ ಮುನಿ ಮಹಾರಾಜರು, ಪೂಜ್ಯಆಚಾರ್ಯ ಶ್ರೀ 108 ಪುಷ್ಪದಂತಸಾಗರ ಮುನಿಮಹಾರಾಜರು, ಪೂಜ್ಯಆಚಾರ್ಯ ಸಿದ್ಧಸೇನ ಮುನಿಮಹಾರಾಜರು, ಮುನಿಸಂಘದವರು ಹಾಗೂ ಮಾತಾಜಿಯವರು ಉಪಸ್ಥಿತರಿದ್ದರು.
ಎಂಟು ಮಂಗಲ ದ್ರವ್ಯಗಳಿಂದ ಅಷ್ಟವಿಧಾರ್ಚನೆ ನಡೆಯಿತು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಅನಿತಾ ಸುರೇಂದ್ರಕುಮಾರ್, ಹರ್ಷೇಂದ್ರಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ವರ್ಮ ಮತ್ತು ಸ್ಥಳೀಯ ಶ್ರಾವಕಿಯರು ಪೂಜೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು.
ಪ್ರೊ.ಎಸ್. ಪ್ರಭಾಕರ್, ಡಿ. ಸುರೇಂದ್ರಕುಮಾರ್ ಮತ್ತು ಡಿ. ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.
ವಜ್ರ ಪಂಜರ ಆರಾಧನೆ ಇಂದು: ಮಂಗಳವಾರ ಬೆಳಿಗ್ಗೆ ಗಂಟೆ 9 ರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಜ್ರ ಪಂಜರ ಆರಾಧನೆ ನಡೆಯುತ್ತದೆ.
ನಾಳೆ ಬುಧವಾರ ಗಣಧರ ವಲಯ ಆರಾಧನೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆರ್.ಯನ್. ಪೂವಣಿ, ಉಜಿರೆ