ಉಜಿರೆ: ಧರ್ಮಸ್ಥಳದಲ್ಲಿ ಸಹ್ಯಾದ್ರಿ ವಸತಿ ಗೃಹದ ಬಳಿ ಹತ್ತು ಎಕ್ರೆ ಪ್ರದೇಶದಲ್ಲಿ ಸೋಮವಾರ ಯಾಂತ್ರೀಕೃತ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
ಕೂಲಿ ಕಾರ್ಮಿಕರ ಕೊರತೆ ಹಾಗೂ ಅಧಿಕ ವೆಚ್ಚದಿಂದಾಗಿ ರೈತರು ಇಂದು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದು, ಯಾಂತ್ರೀಕೃತ ಕೃಷಿಯಿಂದ ಅಧಿಕ ಇಳುವರಿ ಹಾಗೂ ಲಾಭ ಪಡೆಯಬಹುದು ಎಂದು ರೈತರಿಗೆ ತಿಳುವಳಿಕೆ ನೀಡಲಾಯಿತು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಸಕ್ತ ವರ್ಷದಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಬೇಸಾಯ ಮಾಡಲು ಉದ್ದೇಶೀಸಲಾಗಿದೆ ಎಂದು ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

