ಉಜಿರೆ: ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತನೆ ವಾರ್ಷಿಕ ದಿನಾಚರಣೆಯ ಅಂಗವಾಗಿ ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಲಶ ಭಾನುವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅದಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪವಿತ್ರ ನೇತ್ರಾವತಿ ನದಿ ನೀರನ್ನು ಕಲಶಕ್ಕೆ ಹಾಕಿ, ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ಪಕ್ಕದಲ್ಲಿದ್ದ ಪುಟ್ಟ ಮಕ್ಕಳನ್ನೂ ಕರೆದು ಕಲಶಕ್ಕೆ ನಮನ ಸಲ್ಲಿಸಲು ಹೇಳಿ ಸೇನೆ ಹಾಗೂ ದೇಶದ ಬಗ್ಗೆ ಅಭಿಮಾನ ಮತ್ತು ಗೌರವ ಭಾವನೆ ಬೆಳೆಸುವಂತೆ ಹೇಳಿದರು.

ಕಮಾಂಡಿಂಗ್ ಆಫೀಸರ್ ಡಾ. ಎಸ್.ಸಿ. ಭಂಡಾರಿ, ಸಿ. ದಿನೇಶ್, ಬಿ.ಪಿ. ಶಿವಕುಮಾರ್, ನಾರಾಯಣ, ಕೆ.ಎನ್. ಶೇಷಾದ್ರಿ, ಆರ್. ಸತೀಶ್, ಎಂ. ಬಾಬು, ಕೃತಿ, ಅಶ್ವಿನ್ ಬಾಬು ಉಪಸ್ಥಿತರಿದ್ದರು.
2019ರ ಜನವರಿ 25 ರಂದು ಬೆಂಗಳೂರಿನಿಂದ ಹೊರಟ ಕಲಶ ಧರ್ಮಸ್ಥಳಕ್ಕೆ ಭಾನುವಾರ ಬಂದು ಬಳಿಕ ಸುಬ್ರಹ್ಮಣ್ಯಕ್ಕೆ ಯಾನ ಮುಂದುವರಿಸಿದೆ.
ದೇಶದ 20 ರಾಜ್ಯಗಳಲ್ಲಿ 200 ನಗರಗಳಲ್ಲಿ ಕಲಶ ಯಾನ ಮುಂದುವರಿದು 2019ರ ಜುಲೈ 27 ರಂದು ನವ ದೆಹಲಿಯಲ್ಲಿ ಕಾರ್ಗಿಲ್ ಸ್ಮಾರಕ ಸದನ ತಲುಪಿ, ಅಲ್ಲಿ ಅದನ್ನು ಸಂಕ್ಷಿಸಿ ಇಡಲಾಗುವುದು ಎಂದು ಕಮಾಂಡಿಂಗ್ ಆಫೀಸರ್ ಡಾ. ಎಸ್.ಸಿ. ಭಂಡಾರಿ ತಿಳಿಸಿದ್ದಾರೆ.