Sunday, June 29, 2025

ಎಟಿಎಂ. ನಂಬರ್ ಕೇಳಿ ಹಣ ಲಪಟಾಯಿಸಿದ ಭೂಪ!

ಉಜಿರೆ: ಕಲ್ಮಂಜ ಗ್ರಾಮದ ನಿವಾಸಿ ರಾಮಣ್ಣಗೌಡ (ಹೆಸರು ಬದಲಾಯಿಸಿದೆ) ಎಂಬವರ ಬ್ಯಾಂಕ್‌ ಖಾತೆಯಿಂದ ಎಟಿಎಂ ನಂಬರ್ ಪಡೆದು ಹಣ ಲಪಟಾಯಿಸಿದ ಪ್ರಕರಣ ವರದಿಯಾಗಿದೆ.
ಇದೇ 15 ರಂದು ಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ರಾಮಣ್ಣ ಗೌಡರಿಗೆ ದೂರವಾಣಿ ಕರೆ ಮಾಡಿ ಮಾತಿನ ಮೋಡಿಯಿಂದ ಮರುಳು ಮಾಡಿದ. ತಾನು ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಅಧಿಕಾರಿ ಎಂದು ರೈಲು ಬಿಟ್ಟ! ಅದೂ ಹಿಂದಿಯಲ್ಲಿ ನಿರರ್ಗಳವಾಗಿ ಕರ್ಣರಸಾಯನವಾಗಿ ಮಾತನಾಡಿದ ಅಧಿಕಾರಿ ಮಾತು ಕೇಳಿ ಈತ ಎಟಿಎಂ ನಂಬರ್ ಹೇಳಿದ.
ಧರ್ಮಸ್ಥಳ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ರಾಮಣ್ಣ ಗೌಡರ ಉಳಿತಾಯ ಖಾತೆಯಿಂದ ಇದೇ 15 ರಂದು ಶನಿವಾರ ಸಂಜೆ ಗಂಟೆ 6.45ಕ್ಕೆ ರೂ. 4999/-, 6.47ಕ್ಕೆ 4,999/- 6.48ಕ್ಕೆ 9500/- ಹಾಗೂ 6.53ಕ್ಕೆ ರೂ. 1000/- ಹಣವನ್ನು ಲಪಟಾಯಿಸಲಾಗಿದೆ. ಒಟ್ಟು ರೂ. 20498/-ನ್ನು 5 ನಿಮಿಷದಲ್ಲಿ ಲಪಟಾಯಿಸಲಾಗಿದೆ.
ಇದೇ 17 ರಂದು ಸೋಮವಾರ ಧರ್ಮಸ್ಥಳ ಕೆನರಾ ಬ್ಯಾಂಕ್ ಶಾಖೆಗೆ ಬಂದು ಪಾಸ್ ಬುಕ್ ತೋರಿಸಿದಾಗ ಹಣ ಲಪಟಾಯಿಸಿದ ವಿಷಯ ಬೆಳಕಿಗೆ ಬಂದಿದೆ.
ಯಾರಿಗೂ ಎಟಿಎಂ ನಂಬರ್‌ ಕೊಡಬಾರದೆಂದು ಅನೇಕ ಬಾರಿ ಬ್ಯಾಂಕಿನವರೆ ಗ್ರಾಹಕರಿಗೆ ಎಚ್ಚರಿಕೆ ಕೊಡುತ್ತಾರೆ, ಸಂದೇಶ ರವಾನಿಸುತ್ತಾರೆ. ಇನ್ನಾದರೂ ಗ್ರಾಹಕರು ಎಚ್ಚರಿಕೆ ವಹಿಸಬೇಕು.

More from the blog

ನಿರ್ಧಿಷ್ಟ ಗುರಿಯೊಂದಿಗೆ ಯುವವಾಹಿನಿಯ ಸಂಘಟಿತ ಪಯಣ : ಭುವನೇಶ್ ಪಚ್ಚಿನಡ್ಕ..

ಬಂಟ್ವಾಳ : ನಿರ್ದಿಷ್ಟ ಗುರಿಯೊಂದಿಗೆ ಸಾಧನಾ ಪಥದಲ್ಲಿ ಯುವವಾಹಿನಿ ಸಂಘಟಿತವಾಗಿ ಪಯಣಿಸುತ್ತಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ರಜತವರ್ಷದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು. ಅವರು ರವಿವಾರ ಬಿ ಸಿ ರೋಡ್ ಯುವವಾಹಿನಿ ಭವನದಲ್ಲಿ...

ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊಬೈಲ್‌ ಬಳಕೆ ಕಾರಣ – ಆಘಾತಕಾರಿ ವರದಿ ಬೆಳಕಿಗೆ..

ಇತ್ತೀಚೆಗೆ ವಯಸ್ಕರು ಮಾತ್ರವಲ್ಲದೆ ಯುವ ಜನತೆ, ಮಕ್ಕಳಲ್ಲಿ ಕೂಡಾ ಹೃದಯಾಘಾತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಆನೇಕರು ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದೀಗ...

ತುಂಬೆ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ..

ಬಂಟ್ವಾಳ : ಡಾ.ಬಿ.ಅಹಮದ್ ಹಾಜಿ ಅವರ ಸಾಧನಾ ಗಾಥೆಯನ್ನು ಹಾಗೂ ಅವರ ಜೀವನದ ಬಗ್ಗೆ ಕೇಳಿದಾಗ ಅವರು ಎಷ್ಟೊಂದು ಉದಾತ್ತ ವ್ಯಕ್ತಿತ್ವದವರು ಮತ್ತು ಶಿಸ್ತು ಮತ್ತು ಬದ್ಧತೆಯಲ್ಲಿ ಬಾಳಿದವರು ಎನ್ನುವುದು ಅರ್ಥವಾಗುತ್ತದೆ. ಅಂಥವರನ್ನು...

Pneumonia : ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಬಿಜೆಪಿ ಕಾರ್ಯಕರ್ತ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು..

ಬಂಟ್ವಾಳ: ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ಬಿಜೆಪಿ ಕಾರ್ಯಕರ್ತನೊರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಕುಕ್ಕಾಜೆ ನಿವಾಸಿ ಬಿಜೆಪಿ ಯುವ ಕಾರ್ಯಕರ್ತ ,ಸಾಮಾಜಿಕ...