ಸದಾ ಸಮಾಜಮುಖಿ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಯ ವತಿಯಿಂದ
70ನೇ ಗಣರಾಜ್ಯೋತ್ಸವದ ಶುಭದಿನಂದಂದು ಸಮಾಜದ 4 ಅಶಕ್ತ ಕುಟುಂಬಗಳಿಗೆ 90,000 ರೂಪಾಯಿ ಧನ ಸಹಾಯ ಹಸ್ತಾಂತರ.

*ಹೃದಯದಲ್ಲಿ 3 ರಂಧ್ರಗಳಿಂದ* ಸರಿಯಾಗಿ ರಕ್ತ ಚಲಾವಣೆಯಾಗದೆ ಯಾತನೆ ಅನುಭವಿಸುತ್ತಿರುವ *ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಅಗರಿ ಪ್ರಕಾಶ್ ಮಿರಾಂದ ಮತ್ತು ರೇನಿಟಾ ದಂಪತಿಗಳ 4 ತಿಂಗಳ ಮಗು ರೋಯಿಸ್ಟನ್* ನ ಚಿಕಿತ್ಸೆಗೆoದು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದೆ ಮಗು. ಹೆತ್ತವರ ಕಷ್ಟಕ್ಕೆ ರೂ.20,000 ಚೆಕ್ *ಮೂಳೆ ಕ್ಯಾನ್ಸರ್* ನಿಂದ ಬಳಲುತ್ತಿರುವ *ಮಂಗಳೂರು ತಾಲೂಕು ಪಕ್ಷಿಕೆರೆ ಕಾಪಿಕಾಡ್ ಹರೀಶ್ ಭಾರತಿ ದಂಪತಿಗಳ 3 ವರುಷದ ಮಗ ಚೇತನ್* ನ ಚಿಕಿತ್ಸೆಗೆ ರೂ. 25,000 ಚೆಕ್, *ಕಣ್ಣಿನ ಅಂಧತ್ವದಿಂದ* ಅರ್ಧದಲ್ಲೇ ನಿಂತ *ಮಂಗಳೂರು ತಾಲೂಕು ಆಚಾರಿಜೇರ ಕಿಲೆಂಜಾರು ಝಕಾರಿಯರವರ* ಮನೆ ದುರಸ್ತಿಗೆ ಸಹಾಯಕ್ಕೆ ರೂ.20,000 ಚೆಕ್ ಮತ್ತು 4 ವರುಷಗಳ ಹಿಂದೆ ಅಪಘಾತದಲ್ಲಿ *ಎಡ ಕಾಲಿನ ಪಾದ* ಕಳೆದುಕೊಂಡು ಮತ್ತೆ ಅದು ಸರಿಯಾಗಿ ಗುಣಮುಖವಾಗದೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ *ಮಂಗಳೂರು ತಾಲೂಕು ಬಡಗಮಿಜಾರು ಅಂಗಡಿಗುತ್ತು ದಯಾನಂದ ಶೆಟ್ಟಿ ಮತ್ತು ಯಶೋಧರವರ ಮಗ ಅಂಬರೀಷ್* ರವರ ಚಿಕಿತ್ಸೆಗೆ ರೂ.25,000 ಚೆಕ್ ಅನ್ನು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಕಟೀಲು ಇಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.