ನರದ ಸಮಸ್ಯೆಯಿಂದ ಒಂದು ಕಾಲಿನ ಮತ್ತು ಕೈಯ ಸ್ವಾಧೀನ ಕಳೆದುಕೊಂಡಿರುವ *ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ಕೊಳವೂರು ಸಮೀಪದ ತಾರೆಮಾರ್ ಕಾಲೋನಿ ರಮೇಶ್ ಪೂಜಾರಿ ಮತ್ತು ಕಲ್ಯಾಣಿ* ದಂಪತಿಗಳು ಮಗಳಾದ ಶೋಭಾ ಇವರ ಚಿಕಿತ್ಸೆಗೆ ರೂ.25,000 ಚೆಕ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಪೆರಾಡಿ ಗ್ರಾಮದ ಪಾಡಿ ಹೊಸಮನೆಯ ಹರೀಶ್ ಪೂಜಾರಿಯವರ ಪತ್ನಿ ಜಯಂತಿ ಇವರ ಚಿಕಿತ್ಸೆಗೆ ರೂ. 25,000 ಚೆಕ್
ಬೈಕ್ ನಿಯಂತ್ರಣ ತಪ್ಪಿ ಆವರಣ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಚಿಕಿತ್ಸೆ ಪಡೆಯುತ್ತಿರುವ ಬಿ.ಸಿ ರೋಡ್ ತಲಪಾಡಿ ಜೋಮಾದಿಗುಡ್ಡೆಯ ಸಂಜೀವ ಕುಲಾಲ್ ಮತ್ತು ಕುಸುಮ ದಂಪತಿಗಳ ಮಗ ಅಭಿಲಾಷ್ ಇವರು ಚಿಕಿತ್ಸೆಗೆ ರೂ. 10,000 ಚೆಕ್ ಅನ್ನು *ಬರಹಗಾರ, ನಿರ್ದೇಶಕ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿ, ಆರ್ಯಭಟ್ಟ ಪ್ರಶಸ್ತಿ ಪುರಸ್ಕೃತ, ಖ್ಯಾತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಮತ್ತು ಶ್ರೀ ಗುರು ಫ್ರೆಂಡ್ಸ್ ಅಜಿಲಮೊಗರು ಇದರ ಅಧ್ಯಕ್ಷರಾದ ಪುರೋಹಿತ ನವೀನ್ ಶಾಂತಿ ಆಡ್ಯಾಲ್* ಇವರುಗಳ ಸಮ್ಮುಖದಲ್ಲಿ *ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್* ಇಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.