Friday, January 30, 2026

ತುಲು ಲಿಪಿ ಪರೀಕ್ಷೆ ಬರೆದ 72 ಪ್ರಾಯದ ಲಕ್ಮೀ ಅಮ್ಮ ಆನ್ ಲೈನ್ ಮೂಲಕ ಶಿಕ್ಷಣ ಪಡೆದು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದ ಲಕ್ಮೀ ಅಮ್ಮ

ಬಂಟ್ವಾಳ: ತಾಲೂಕಿನ ಭಂಡಾರಿಬೆಟ್ಟು ವ್ಯಾಯಮ ಶಾಲೆಯಲ್ಲಿ ತುಲು ಲಿಪಿ ಪರೀಕ್ಷೆ ಬರೆಯುತ್ತಿರುವ 72 ವರ್ಷದ ಲಕ್ಮೀ ಅಮ್ಮನವರು.

ತುಳು ಅಕಾಡೆಮಿ, ಜೈತುಳು ಸಂಘಟನೆ ಹಾಗೂ ಯುವಜನ ವ್ಯಾಯಮ ಶಾಲೆ ಭಂಡಾರಿಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ತುಳು ಲಿಪಿ ಪರೀಕ್ಷೆ ಭಂಡಾರಿ ಬೆಟ್ಟು ವ್ಯಾಯಮ‌ ಶಾಲೆಯಲ್ಲಿ ಆದಿತ್ಯವಾರ ನಡೆಯಿತು.

ಬಂಟ್ವಾಳ ತಾಲೂಕಿನ ಸಜೀಪಮುನ್ನೂರುವಿನ ಪಾಣೆಮಂಗಳೂರು ನಿವಾಸಿ ನಿವೃತ್ತ ಶಿಕ್ಷಕಿ ಎನ್.ಬಿ.ಲಕ್ಮೀ ಅಮ್ಮನವರು ತುಲು ಲಿಪಿ ಪರೀಕ್ಷೆ ಯಲ್ಲಿ ಪರೀಕ್ಷೆ ಬರೆದು ಯುವಕರಿಗೆ ಸರಿ ಸಾಟಿಯೆನಿಸಿದರು.

ತುಳು ಅಕಾಡೆಮಿ, ಜೈತುಳು ಸಂಘಟನೆ ಹಾಗೂ ಯುವಜನ ವ್ಯಾಯಮ ಶಾಲೆ ಭಂಡಾರಿಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ” ಬಲೆ ತುಲು ಕಲ್ಪುಗ” ಉಚಿತ ತುಲು ಲಿಪಿ ಕಲಿಕಾ ಕಾರ್ಯಗಾರ ನಡೆಸಿದ್ದರು.

ತುಲು ಲಿಪಿ ತರಗತಿ ನಾಲ್ಕು ವಾರಗಳ ಕಾಲ ನಡೆದು ಬಳಿಕ ಇಂದು ಪರೀಕ್ಷೆ ನಡೆಸಲಾಗಿದೆ.

ಆದರೆ 72 ವರ್ಷ ಪ್ರಾಯದ ಲಕ್ಮೀ ಅಮ್ಮನವರು ಆನ್ ಲೈನ್ ಕ್ಲಾಸು ಮೂಲಕ ತರಬೇತಿ ಪಡೆದಿದ್ದು ಇಂದು ಪರೀಕ್ಷಾ ಕೇಂದ್ರ ಕ್ಕೆ ಬಂದು ಪರೀಕ್ಷೆ ಬರೆದು ಸೈ ಎನಿಸಿಕೊಂಡರು.

 *ಸಾರ್ಥಕತೆ ತಂದಿದೆ* 

ತುಲು ಲಿಪಿ ಪರೀಕ್ಷೆ ಗೆ ಒಟ್ಟು 30 ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆ ಬರೆದಿದ್ದಾರೆ.ಅದರಲ್ಲಿ

ಹಿರಿಯ 72 ವರ್ಷ ವಯಸ್ಸಿನ ಲಕ್ಮೀ ಅಮ್ಮನವರು ಪರೀಕ್ಷೆ ಬರೆದು ಯುವಕರಿಗೆ ಹುರುಪು

ತುಂಬಿದ್ದಾರೆ. ಅಮೂಲಕ ತುಲು ಕಲಿಕೆಗೆ ಹೆಚ್ಚಿನ ಮಹತ್ವ ಮತ್ತು ಬಳಕೆಗೆ ತರಲು ಸಹಕಾರ ಸಿಕ್ಕಿದೆ ಎಂದು ತುಲು ಲಿಪಿ ಶಿಕ್ಷಕಿ ಪೂರ್ಣಿಮಾ ಬಂಟ್ವಾಳ ತಿಳಿಸಿದ್ದಾರೆ.

ನಾಲ್ಕು ಅಧಿತ್ಯವಾರ ಭಂಡಾರಿ ಬೆಟ್ಟು ವ್ಯಾಯಮ ಶಾಲೆಯಲ್ಲಿ ತುಲು ಲಿಪಿಯ ಬಗ್ಗೆ ಕ್ಲಾಸ್ ಮಾಡಿದ್ದೇವೆ, ಇನ್ನು ಉಳಿದಂತೆ ಆನ್ ಲೈನ್ ಕ್ಲಾಸ್ ಮೂಲಕವೂ ಶಿಕ್ಷಣ ನೀಡಿದ್ದೇವೆ.

ತರಬೇತಿಯ ಬಳಿಕ ಇಂದು ಪರೀಕ್ಷೆ ನಡೆಸಿದ್ದೇವೆ .ಉತ್ತಮ ವಾದ ಪ್ರೋತ್ಸಾಹ ಸಿಕ್ಕಿದೆ.ಎರಡು ದಿನಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದರು.

ತುಲು ಲಿಪಿ ಶಿಕ್ಷಕರಾದ ಜಗದೀಶ್ ಗೌಡ ಕಲ್ಕಳ ಹಾಗೂ ಭವಿತಾ ಗೌಡ ಹಾಗೂ ಪೂರ್ಣಿಮಾ ಪರೀಕ್ಷೆ ಕೇಂದ್ರ ದಲ್ಲಿ ಉಪಸ್ಥಿತರಿದ್ದು ಪರೀಕ್ಷೆ ನಡೆಸಿಕೊಟ್ಟರು.

More from the blog

ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗ, ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ, ಐಪಿಎಸ್ (ಕೆಎನ್ 2023) ನೇಮಿಸಲಾಗಿದೆ. ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆಗೆ ಸಹಾಯಕ ಪೊಲೀಸ್...

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...