Thursday, February 13, 2025

ಬಂಟ್ವಾಳ ತಾ.ತುಳುಕೂಟದ ಅಧ್ಯಕ್ಷರಾಗಿ ಸುದರ್ಶನ್ ಜೈನ್ ಪುನರಾಯ್ಕೆ‌

ಬಂಟ್ವಾಳ: ಬಂಟ್ವಾಳ ತಾಲೂಕು ತುಳು ಕೂಟ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷದ ಅವಧಿಗೆ ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪುನರಾಯ್ಕೆ ಆಗಿದ್ದಾರೆ.
ಬಿ.ಸಿ.ರೋಡ್ ನಲ್ಲಿ ಬುಧವಾರ ನಡೆದ ತುಳು ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅವರನ್ನು ಕೂಟದ ಗೌರವಾಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು.
ನೂತನ  ಕಾರ್ಯದರ್ಶಿಯಾಗಿ ಎಚ್ಕೆ ನಯನಾಡು, ಕೋಶಾಧಿಕಾರಿ ಕೆ.ಸುಭಾಶ್ಚಂದ್ರ ಜೈನ್ ಆಯ್ಕೆಗೊಂಡರು. ಪ್ರಧಾನ ಸಲಹೆಗಾರರಾಗಿ ಡಿ.ಎಂ. ಕುಲಾಲ್, ಮಂಜು ವಿಟ್ಲ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಮೇಶ್ ನಾಕ್ ರಾಯಿ,  ಸರಪಾಡಿ ಅಶೋಕ ಶೆಟ್ಟಿ,  ಶಾರದಾ ಬಂಗೇರ, ಜೊತೆಕಾರ್ಯದರ್ಶಿ ಸೇಸಪ್ಪ ಮಾಸ್ಟರ್, ಸದಾಶಿವ ಪುತ್ರನ್,  ಸಂಘಟನಾ ಕಾರ್ಯದರ್ಶಿಗಳಾಗಿ  ಸೀತಾರಾಮ ಶೆಟ್ಟಿ, ದಿವಾಕರ ದಾಸ್, ಪ್ರಭಾಕರ ಪ್ರಭು,  ರಾಧಾಕೃಷ್ಣ ರೈ,  ಕ್ರೀಡಾ ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ  ಮೋಹನ್‌ದಾಸ್ ಕೊಟ್ಟಾರಿ, ಸದಸ್ಯರಾಗಿ  ಮುರಳೀಧರ ಶೆಟ್ಟಿ,   ಪರಮೇಶ್ವರ ಎಂ.,  ಮನೋಜ್ ಆಳ್ವ,  ಮಹಾಬರ ರೈ ಬರ್ಕೆಗುತ್ತು,  ಚಂದ್ರಶೇಖರ ಗಟ್ಟಿ, ದೇವಪ್ಪ ಕುಲಾಲ್, ಸದಾನಂದ ಶೆಟ್ಟಿ ಪಂಜಿಕಲ್ಲು,  ಮಧುಸೂದನ ಶೆಣೈ,  ಮುತ್ತಪ್ಪ ಪೂಚಾರಿ ಚಂಡ್ತಿಮಾರ್,  ವಾಸು ಮಾಸ್ಟರ್,  ದಿನೇಶ್ ಶೆಟ್ಟಿ, ಗಣೇಶ್ ನಾಕ್, ಸತೀಶ್ ಕುಮಾರ್ ಕಾರ್ತಿಕ್ ಸ್ಟುಡಿಯೊ ಆಯ್ಕೆಯಾಗಿದ್ದಾರೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...