ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ರಥೋತ್ಸವದ ಮರುದಿನ ಆರಡದಂದು (ಅವಭೃತ ಸ್ನಾನ) ಭಕ್ತರಿಂದ ತುಲಾಭಾರ ಸೇವೆ ನಡೆಯುತ್ತಿತ್ತು. ಆದರೆ ಈ ವರ್ಷ ಭಕ್ತರ ಅನುಕೂಲಕ್ಕೋಸ್ಕರ ದಂಡಮಾಲೆಯ ಸಂದರ್ಭದಲ್ಲಿ, ಐದು ದಿನ ತುಲಾಭಾರ ಸೇವೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಮಾ. 24ರಂದು ಬೆಳಿಗ್ಗೆ ಸುಮಾರು 130 ಮಂದಿ ಹರಕೆ ಹೊತ್ತ ಭಕ್ತಾಧಿಗಳು ಅಕ್ಕಿ, ಬೆಲ್ಲ, ಸೀಯಾಳ, ಮೊದಲಾದ ಸೊತ್ತುಗಳಿಂದ ತುಲಾಭಾರ ಸೇವೆ ನಡೆಸಿದರು. ಮುಂದಿನ ದಂಡೆಮಾಲೆ ದಿನಗಳಾದ ಮಾ. 29, ಎಪ್ರಿಲ್ 3 ಮತ್ತು ಎ. 12ರಂದು ತುಲಾಭಾರ ನಡೆಯಲಿದೆ. ಸ್ವಯಂಸೇವಕರು ಟೋಕನ್ ಪ್ರಕಾರ ಸಾಲುಸಾಲಾಗಿ ಬಂದ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಸಹಕರಿಸುತ್ತಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಸೇವಾರ್ಥಿಗಳಿಗೆ ದೇವರ ಆಭರಣ ತೊಡಿಸಿದರು ಮತ್ತು ಸೇವೆ ಬಳಿಕ ಪ್ರಸಾದ ವಿತರಿಸಿದರು.