ಬಂಟ್ವಾಳ: ಸಜೀಪ ಪೆಲತ್ತಕಟ್ಟೆ ಯಕ್ಷಗಾನ ಮೈದಾನದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಪುಷ್ಪಾರ್ಚನೆ ನಮನ ಸಲ್ಲಿಸಲಾಯಿತು.


ನಿವೃತ್ತ ಯೋಧ ರಾಜೇಂದ್ರ ಅವರು ಸೈನಿಕರ ನೈಜ ಪರಿಸ್ಥಿತಿಯನ್ನು ತಿಳಿಸಿದರು. ಸಜೀಪದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರಬೇಕು. ಅದಕ್ಕಾಗಿ ತಾನು ಉಚಿತ ತರಬೇತಿ ನೀಡುತ್ತಿದ್ದು, ತೋರ್ಪಡಿಕೆಯ ದೇಶಭಕ್ತಿಯನ್ನು ಬಿಟ್ಟು ಸೇನೆಗೆ ನಿಮ್ಮ ಮಕ್ಕಳನ್ನು ಸೇರಿಸಿ ನಿಜವಾದ ದೇಶಭಕ್ತರಾಗಿ ಎಂದು ಹೇಳಿದರು. ತನ್ನೊಂದಿಗೆ ತರಬೇತಿ ಪಡೆದಿದ್ದ ನಾಲ್ವರು ಯೋಧರು ಪುಲ್ವಾಮದಲ್ಲಿ ಹುತಾತ್ಮರಾಗಿದ್ದನ್ನು ನೆನೆದು ಭಾವುಕರಾದರು.

ಸಜೀಪ ಜನಸೇವಾ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ ಮತ್ತು ಸಜೀಪ ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದದ ಅಧ್ಯಕ್ಷ ನವೀನ್ ಸುವರ್ಣ ಇವರುಗಳು ಯೋಧರನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಶ್ರೀಕಾಂತ್ ಶೆಟ್ಟಿ ಸಂಕೇಶ, ವಿಶ್ವ ಹಿಂದೂ ಪರಿಷತ್ ಮುಖಂಡ ಲೋಹಿತ್ ಪಣೋಲಿಬೈಲು, ಶಿಕ್ಷಕಿ ಜಯಲಕ್ಷ್ಮೀ, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಸಹಕಾರ್ಯದರ್ಶಿ ದೀಪಕ್ ಸಜೀಪ, ಭಜರಂಗದಳದ ಹರೀಶ್ ಕೊಳಕೆ ಮತ್ತು ಅಪಾರ ರಾಷ್ಟ್ರ ಭಕ್ತ ಸಹೋದರ ಬಂಧುಗಳು ಉಪಸ್ಥಿತರಿದ್ದು ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.

