ಬಂಟ್ವಾಳ : ಕಾವಳಮೂಡೂರು ಗ್ರಾಮ ಪಂಚಾಯತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರು, ಸಿ. ಪಿ. ಸಿ. ಆರ್. ಐ. ಕಾಸರಗೋಡು, ಡೇ- ಎನ್ ಆರ್ ಎಲ್ ಎಂ ಸಂಜೀವಿನಿ, ಬಂಟ್ವಾಳ ತಾಲೂಕು ಇವರ ಸಹಭಾಗಿತ್ವದಲ್ಲಿ ಫೆ.6ರಂದು ಕಾವಳಮೂಡೂರು ಗ್ರಾಮ ಪಂಚಾಯತ್ ನ ಸಹಕಾರದಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ತೆಂಗಿನ ಗಿಡ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಜಿತ್ ಶೆಟ್ಟಿ,ಕೃಷಿ ವಿಜ್ಞಾನ ಕೇಂದ್ರ ದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಟಿ ಜೆ ರಮೇಶ್ ರವರು ಫಲಾನುಭವಿಗಳಿಗೆ ಗಿಡ ವಿತರಿಸಿದರು., ಸಿ. ಪಿ. ಸಿ. ಆರ್. ಐ. ಕಾಸರಗೋಡು ನ ವಿಜ್ಞಾನಿ ಡಾ. ರಾಜ್ ಕುಮಾರ್ ರವರು ತೆಂಗಿನ ಗಿಡದ ನಾಟಿ ಕ್ರಮ ಹಾಗೂ ಪೋಷಣೆ ಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರಚನ್ ಕುಮಾರ್, ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ಎನ್.ಆರ್.ಎಲ್.ಎಂ ನ ತಾಲೂಕು ವ್ಯವಸ್ಥಾಪಕಿ ಕು |ಸಾಂಘವಿ ಹಾಗು ಒಕ್ಕೂಟದ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬಂಟ್ವಾಳ ತಾಲೂಕಿನಲ್ಲಿ 373 ಫಲಾನುಭವಿಗಳಿಗೆ ತಲಾ ಎರಡೆರಡು ಸಸಿಯಂತೆ 746 ಸಸಿಗಳನ್ನು ವಿತರಿಸಲಾಗಿರುತ್ತದೆ.