ಬಂಟ್ವಾಳ: ಯಾವಾಗಲೂ ಖಾಕಿ ತೊಟ್ಟು ಕೈಯಲ್ಲಿ ಬೆತ್ತ ಹಿಡಿದು ಸೀಟಿ ಊದಿ ಟ್ರಾಫಿಕ್ ಕಿರಿಕಿರಿಯನ್ನು ಸರಿ ಮಾಡುತ್ತಿದ್ದ ಪೋಲೀಸರು ಇದೇನಪ್ಪ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದಾರೆ , ಬಿಳಿ ಟೀ ಶರ್ಟ್ ಖಾಕಿ ಪ್ಯಾಂಟ್ ಹಾಕಿ ಕೊಂಡು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಟ್ರಾಫಿಕ್ ಠಾಣೆಯಿಂದ ಟ್ರಾಫಿಕ್ ಪೋಲೀಸ್ ಠಾಣೆ ಯ ಎಲ್ಲಾ ಸಿಬ್ಬಂದಿ ಗಳು ಸಾಲಾಗಿ ರಸ್ತೆಯಲ್ಲಿ ಶಿಸ್ತು ಬದ್ದವಾಗಿ ನಡೆದುಕೊಂಡು ಹೋಗುವಾಗ ಎಲ್ಲರ ಚಿತ್ತ ಅವರ ಮೇಲೆಯೇ ಇತ್ತು.

ಇವರು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಿಂದ ನೇರವಾಗಿ ವಾಕಿಂಗ್ ಮೂಲಕ ತೆರಳಿದ್ದು ನರಹರಿ ಸದಾಶಿವ ದೇವಸ್ಥಾನ ಕ್ಕೆ.
ದಿನದ 24 ಗಂಟೆಯೂ ಕೆಲಸದ ಒತ್ತಡದ ಮಧ್ಯೆ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಲೀಸರು ವಾರದಲ್ಲಿ ಒಮ್ಮೆಯಾದರೂ ಟ್ರಕ್ಕಿಂಗ್ , ವಾಕಿಂಗ್ , ಯೋಗ , ಹೀಗೆ ಬೇರೆ ಬೇರೆ ರೀತಿಯಲ್ಲಿ ಪೋಲೀಸರ ನ್ನು ತೊಡಗಿಸಿಕೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಅವರು ತಿಳಿಸಿದ್ದಾರೆ ಯಂತೆ .
ಹಾಗಾಗಿ ಇಂದಿನಿಂದ ಈ ವಿನೂತನ ರೀತಿಯ ಯೋಜನೆಗೆ ಚಾಲನೆ ನೀಡಿದ್ದಾರೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರ ಅದೇಶದಂತೆ
ಪೋಲೀಸರ ಮನಸ್ಸಿನ ಒತ್ತಡ ಕಡಿಮೆ ಮಾಡಲು ನಾನು ಮತ್ತು ನನ್ನ ತಂಡದೊಂದಿಗೆ ಟ್ರಕ್ಕಿಂಗ್ ಹೋಗುತ್ತಿದ್ದೇನೆ ಎಂದು ಮೆಲ್ಕಾರ್ ಟ್ರಾಫಿಕ್ ಎಸ್.ಐ. ಮಂಜುನಾಥ್ ತಿಳಿಸಿದ್ದಾರೆ.
ಎಸ.ಪಿ.ಯವರ ಹೊಸ ಪ್ರಯತ್ನ ವಾಗಿದ್ದು ಪ್ರತಿ ವಾರ ಯೋಗ ಹೀಗೆ ವಿಭಿನ್ನ ರೀತಿಯ ಕಾರ್ಯಕ್ರಮ ಗಳ ಮೂಲಕ ಪೋಲೀಸರ ಮಾನಸಿಕ ,ದೈಹಿಕ , ಬೌದ್ಧಿಕ ಮಟ್ಟವನ್ನು ಉತ್ತಮ ಪಡಿಸುವುದು ಯೋಚನೆಯಾಗಿದೆ.
ಇಂದು ನರಹರಿ ಶ್ರೀ ಸದಾಶಿವ ದೇವಸ್ಥಾನ ಕ್ಕೆ ಟ್ರೆಕ್ಕಿಂಗ್ ಮೂಲಕ ಸಾಗಿ ದೇವರ ದರ್ಶನ ಪಡೆದು ಎಸ್.ಪಿ.ಯವರ ಯೋಚನೆಗೆ ನಾವು ಮೂಹೂರ್ತ ಮಾಡುತ್ತೇವೆ ಎಂದು ಅವರು ಹೇಳಿದರು.